ಕಿಡ್ನಿ ಕೊಳ್ಳುವ, ಮಾರುವವರೇ ಟಾರ್ಗೆಟ್; ಕಿಡ್ನಿ ಡೊನೇಶನ್ ಎಂದು ಕೋಟಿ ಕೋಟಿ ಹಣ ವಂಚಿಸುತ್ತಿದ್ದ ಖದೀಮರು ಅರೆಸ್ಟ್ | Police arrest 3 accused for creating hospital fake website and fraud in bengaluru


ಕಿಡ್ನಿ ಕೊಳ್ಳುವ, ಮಾರುವವರೇ ಟಾರ್ಗೆಟ್; ಕಿಡ್ನಿ ಡೊನೇಶನ್ ಎಂದು ಕೋಟಿ ಕೋಟಿ ಹಣ ವಂಚಿಸುತ್ತಿದ್ದ ಖದೀಮರು ಅರೆಸ್ಟ್

ಸಾಂಕೇತಿಕ ಚಿತ್ರ

ಬೆಂಗಳೂರು: ನಗರದಲ್ಲಿ ಬಿಗ್ ಕಿಡ್ನಿ ಡೊನೇಶನ್ ರಾಕೆಟ್ ಪೊಲೀಸರ ಬಲೆಗೆ ಬಿದ್ದಿದೆ. ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ ಸಾರ್ವಜನಿಕರಿಗೆ ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಿಡ್ನಿ ಕೊಳ್ಳುವ ಹಾಗೂ ಮಾರುವವರನ್ನೇ ಟಾರ್ಗೆಟ್ ಮಾಡಿ ಕಿಡ್ನಿ ಸಂಬಂಧಿತ ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಇತ್ತೀಚೆಗೆ ಸಾಗರ್ ಆಸ್ಪತ್ರೆಯ ನಕಲಿ ವೆಬ್ ಸೈಟ್ ಸೃಷ್ಟಿಸಿದ್ದ ಆರೋಪಿಗಳು, ಕಿಡ್ನಿ ಡೊನೇಶನ್ ಸಂಬಂಧಿತ ಹಣ ಕೇಳುತ್ತಿರುವ ಬಗ್ಗೆ ಕೆಲ ಮಾಹಿತಿ ಸಮೇತ ಉಲ್ಲೇಖಿಸಿ ದೂರು ನೀಡಲಾಗಿತ್ತು. ಆಸ್ಪತ್ರೆಯಿಂದ ಹೆಚ್ಎಸ್ಆರ್ ಲೇಔಟ್ನ ಸಿಇಎನ್ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಇಎನ್ ಪೊಲೀಸರು ವಿದೇಶಿಗರ ಕೃತ್ಯದ ಬಗ್ಗೆ ಸಾಕ್ಷಿ ಪತ್ತೆ ಮಾಡಿದ್ದಾರೆ. ಅಮೃತಹಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ಮೂವರು ವಿದೇಶಿಗರು ಪತ್ತೆಯಾಗಿದ್ದು ತನಿಖೆ ವೇಳೆ ಬೃಹತ ವಂಚನೆ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸುತಿದ್ದರು. ಒಂದು ಕಿಡ್ನಿಗೆ 4 ಕೋಟಿ ಕೊಡುವುದಾಗಿ ಆಫರ್ ನೀಡ್ತಿದ್ದರು. ವಾಟ್ಸ್ ಆ್ಯಪ್ ಮುಖಾಂತರ ರಿಜಿಸ್ಟರ್ ಫೀಸ್ ಹಾಗೂ ವಿವಿಧ ಮಾದರಿಯ ಫೀಸ್ ನಲ್ಲಿ ಹಣ ವಸೂಲಿ ಮಾಡ್ತಿದ್ದರು. ಎಲ್ಲವನ್ನೂ ಫೋನ್ ಮುಖಾಂತರವೇ ನಡೆಸುತ್ತಿದ್ದರು. ಬ್ಯಾಂಕ್ ನಲ್ಲಿ ಹಣ ಡೆಪಾಸಿಟ್ ಆಗಿದೆ ಅದರಿಂದ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಬರಲಿರುವ ಹಣದ ಶೇ.30ರಷ್ಟು ಹಣ ಪೇ ಮಾಡಬೇಕೆಂದು ಆಮೀಷ ಒಡ್ಡಿ ಕೋಟಿ ಕೋಟಿ ಆಸೆ ತೋರಿಸಿ ವಂಚಿಸುತ್ತಿದ್ದರು. ಆದರೆ ಈವರೆಗೂ ಯಾರು ದೂರು ನೀಡಿಲ್ಲ. ಸದ್ಯ ಯಾರೇ ನೊಂದವರಿದ್ದರೂ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

TV9 Kannada


Leave a Reply

Your email address will not be published.