ಬಾಹ್ಯಾಕಾಶದಲ್ಲೊಂದು ನಿಲ್ದಾಣವನ್ನ ಸ್ಥಾಪಿಸಿ, ಅಲ್ಲಿ ವಿಜ್ಞಾನಿಗಳು, ಸಂಶೋಧಕರನ್ನ ಇರಿಸಿ ಹಲವು ಸಂಶೋಧನೆಗಳನ್ನ ನಡೆಸುವ ಕಲ್ಪನೆಯೇ ಅದ್ಭುತವಾದುದು. ಇಂಥ ಕಲ್ಪನೆಯನ್ನ ನಾಸಾ ಹಲವು ವರ್ಷಗಳ ಹಿಂದೆಯೇ ಸಾಕಾರಗೊಳಿಸಿದೆ.

ಇಂಥ ಅಂತಾರಾಷ್ಟ್ರೀಯ ಸ್ಟೇಸ್ ಸ್ಟೇಷನ್ ಭೂಮಿಯಿಂದ 410 ಕಿಮೀ ಎತ್ತರದಲ್ಲಿ ಭೂಮಿಯನ್ನು ಸುತ್ತುತ್ತಾ ತನ್ನ ಕಾರ್ಯ ನಿರ್ವಹಿಸುತ್ತಿದೆ.. ಇತ್ತೀಚೆಗೆ ನಾಸಾ ಈ ಸ್ಪೇಸ್ ಸ್ಟೇಷನ್​ನ ಫೋಟೋಗಳನ್ನ ಹಂಚಿಕೊಂಡಿದೆ. ದೈತ್ಯ ಸೂರ್ಯನ ಎದುರು ಸ್ಟೇಸ್ ಸ್ಟೇಷನ್ ಹಾದು ಹೋಗುತ್ತಿರುವ ಫೋಟೋಗಳನ್ನ ನಾಸಾ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

 

 

View this post on Instagram

 

A post shared by NASA (@nasa)

7 ವಿಭಿನ್ನ ಸಮಯಗಳಲ್ಲಿ ಈ ಫೋಟೋಗಳನ್ನ ತೆಗೆದಿರುವ ನಾಸಾ ಅವುಗಳ ಕೊಂಪೋಸೈಟ್ ಇಮೇಜ್​ ಆಗಿ ತಯಾರಿಸಿದೆ.ವರ್ಜೀನಿಯಾದಿಂದ ಈ ಫೋಟೋವನ್ನ ತೆಗೆಯಲಾಗಿದ್ದು ಕಿತ್ತಳೆ ಬಣ್ಣದ ಸೂರ್ಯನ ಎದುರು ಸ್ಪೇಸ್ ಸ್ಟೇಷನ್ ಸಣ್ಣದೊಂದು ವಸ್ತುವಿನಂತೆ ಗೋಚರಿಸುತ್ತಿದೆ.

The post ಕಿತ್ತಳೆ ಸೂರ್ಯನ ಎದುರು ಸ್ಟೇಸ್ ಸ್ಟೇಷನ್ ಕಂಡಾಗ; ಅದ್ಭುತ ಫೋಟೋ ಹಂಚಿಕೊಂಡ ನಾಸಾ appeared first on News First Kannada.

Source: newsfirstlive.com

Source link