ಕಿತ್ತು ಹೋಗುತ್ತಿದೆ ಪ್ರಧಾನಿ ಬಂದಾಗ ನಿರ್ಮಿಸಿದ್ದ ರಸ್ತೆ! ಬಿಬಿಎಂಪಿ ಕಳಪೆ ಕಾಮಗಾರಿಯ ಕರಾಳ ಮುಖ ಬಯಲು | Road constructed by BBMP during PM Modi Bengaluru visit is damages due to poor quality Here is the pics


ಮೋದಿ ಬರುತ್ತಾರೆಂದು ಬಿಬಿಎಂಪಿ (BBMP) ಕೋಟಿ ಕೋಟಿ ಹಣ ಖರ್ಚು ಮಾಡಿ ರಸ್ತೆಗಳನ್ನ ಅಭಿವೃದ್ಧಿ ಪಡಿಸಿದೆ. ಆದರೆ ಅಭಿವೃದ್ಧಿ ಮಾಡಿ ಒಂದು ವಾರ ಕಳೆಯುವ ಮೊದಲೇ ರಸ್ತೆ ಕಿತ್ತು ಹೋಗುತ್ತಿದ್ದು, ಬಿಬಿಎಂಪಿ ಕಳಪೆ ಕಾಮಗಾರಿಯ ಕರಾಳ ಮುಖ ಬಯಲಾಗಿದೆ.

ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯಕ್ಕೆ ಆಗಮಿಸಿದ್ದರು. ಮೋದಿ ಬರುತ್ತಾರೆಂದು ಬಿಬಿಎಂಪಿ (BBMP) ಕೋಟಿ ಕೋಟಿ ಹಣ ಖರ್ಚು ಮಾಡಿ ರಸ್ತೆಗಳನ್ನ ಅಭಿವೃದ್ಧಿ ಪಡಿಸಿದೆ. ಆದರೆ ಅಭಿವೃದ್ಧಿ ಮಾಡಿ ಒಂದು ವಾರ ಕಳೆಯುವ ಮೊದಲೇ ರಸ್ತೆ ಕಿತ್ತು ಹೋಗುತ್ತಿದ್ದು, ಬಿಬಿಎಂಪಿ ಕಳಪೆ ಕಾಮಗಾರಿಯ ಕರಾಳ ಮುಖ ಬಯಲಾಗಿದೆ. ಮಳೆಯಿಂದ ರಸ್ತೆ ಕಿತ್ತು ಹೋಗಿತ್ತು. ಹೀಗಾಗಿ ಬಿಬಿಎಂಪಿ ನಿನ್ನೆ ಬೆಳಗ್ಗೆ ಮತ್ತೆ ಡಾಂಬರೀಕರಣ ಮಾಡಿತ್ತು. ನಿನ್ನೆ ಮಾಡಿದ್ದ ಡಾಂಬರೀಕರಣ ಕೂಡ ಇದೀಗ ಕಿತ್ತು ಹೋಗಿದೆ.

ಬಿಬಿಎಂಪಿ 23 ಕೋಟಿ ರೂಪಾಯಿ ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಮಾಡಿದೆ. ಆದರೆ ಇದೀಗ ಡಾಂಬರೀಕರಣ ಚಾಕೋಲೆಟ್​ನಂತೆ ಕಿತ್ತು ಬರುತ್ತಿದೆ. ಮೋದಿ ಸಂಚರಿಸಲು ನಗರದಲ್ಲಿ 14 ಕಿ.ಮೀ. ರಸ್ತೆ ಡಾಂಬರೀಕರಣ, ಫುಟ್​​ಪಾತ್ ಸ್ಲ್ಯಾಬ್, ಬೀದಿ ದೀಪ, ಮರಗಳ ರೆಂಬೆ ಕಟ್, ಚರಂಡಿ ಸ್ವಚ್ಛತೆ ಸುಮಾರು 23 ಕೋಟಿ ರೂ. ಖರ್ಚಾಗಿದೆ ಎಂದು ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದ್ದರು.

TV9 Kannada


Leave a Reply

Your email address will not be published.