ಧಾರವಾಡ: ಹುಬ್ಬಳ್ಳಿಯಲ್ಲೂ ಬ್ಲ್ಯಾಕ್ ಫಂಗಸ್​ನಿಂದ ಜನ ಬಳಲುತ್ತಿದ್ದು, 8 ಮಂದಿಗೆ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಅಂತಾ ಕಿಮ್ಸ್​ನ ಇ ಅಂಡ್ ಡಿ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಮಾಹಿತಿ ನೀಡಿದ್ದಾರೆ.

ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಅರ್ಧ ತಲೆ ನೋವಿನ ಮೂಲಕ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಮೂಗಿನಲ್ಲಿ ಬ್ಲ್ಯಾಕ್ ಫಂಗಸ್ ತೆಗೆದು ಹಾಕುವವರೆಗೂ ಚಿಕಿತ್ಸೆ ನೀಡಲಾಗುತ್ತೆ. ಹೆಚ್ಚಾಗಿ ಮಧುಮೇಹ ಇರುವ ಜನರಲ್ಲಿ ಈ ರೋಗ ಕಾಣಿಸಿಕೊಳ್ತಿದೆ ಅಂತಾ ಮಾಹಿತಿ ನೀಡಿದ್ದಾರೆ.

ಕೋವಿಡ್ ಆತಂಕದ ನಡುವೆಯೇ ಇದೀಗ ಬ್ಲ್ಯಾಕ್ ಫಂಗಸ್ ಕಾಟ ಶುರುವಾಗಿದೆ. ಚಿಕಿತ್ಸೆ ಸಹ ಅಧಿಕ ವೆಚ್ಚವಾಗಿ ಇರುವ ಹಿನ್ನೆಲೆಯಲ್ಲಿ ಕಿಮ್ಸ್ ನಿರ್ದೇಶಕರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ಮಾಡಿದ್ದಾರೆ. ಮೊದಲಿನಿಂದಲೂ ಇದ್ದ ರೋಗ, ಇದೀಗ ದಿಢೀರ್ ಕಾಣಿಸಿಕೊಂಡಿದೆ. ಕಿಮ್ಸ್​ನಲ್ಲಿ ಸಹ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಸಹ ತಡ ಮಾಡದೆ ಚೆಕ್ ಮಾಡಿಸಿಕೊಳ್ಳುವುದು ಉತ್ತಮ. ತಲೆ ನೋವು ಕಾಣಿಸಿಕೊಂಡರೆ ಅಲಕ್ಷ್ಯ ಮಾಡೋದು ಬೇಡ. ವಯಸ್ಸಿನ ಮಿತಿ ಇಲ್ಲದೇ ಎಲ್ಲರೂ ಜಾಗೃತರಾಗಿರಬೇಕು.

ಈ ರೋಗದಿಂದ ಕಣ್ಣು ಹೋಗಬಹುದು, ಜೀವಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಯಾರು ಭಯಪಡೋದು ಬೇಡ. ಸರಿಯಾದ ವೇಳೆಯಲ್ಲಿ ಬಂದು ಟೆಸ್ಟ್ ಮಾಡಿಸಿ ಚಿಕಿತ್ಸೆ ಪಡೆಯುವುದು ಉತ್ತಮ ಅಂತಾ ಡಾ.ರವೀಂದ್ರ ತಿಳಿಸಿದ್ದಾರೆ.

The post ಕಿಮ್ಸ್​​ನಲ್ಲಿ 8 ಮಂದಿಗೆ ಬ್ಲಾಕ್ ಫಂಗಸ್​ ಕಾಣಿಸಿಕೊಂಡಿದೆ -​ಡಾ.ರವೀಂದ್ರ appeared first on News First Kannada.

Source: newsfirstlive.com

Source link