ಹುಬ್ಬಳ್ಳಿ: ಆ್ಯಂಬುಲೆನ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಸ್​ ಸಿಬ್ಬಂದಿ ಮೈನುದ್ದೀನ್ ವಿರುದ್ಧ ದೂರು ದಾಖಲಿಸಲು ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಸೂಚಿಸಿದ್ದಾರೆ.

ನ್ಯೂಸ್​ಫಸ್ಟ್​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ‘ಹೆಣದ ಮೇಲೆ ಹಣ ಮಾಡೋ ಧನಪಿಶಾಚಿಗಳ ಕರಾಳಮುಖ’ ಬಯಲಾಗಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ, ಆರೋಪ ಕೇಳಿ ಬಂದಿರುವ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಸೂಚನೆ ನೀಡಿದ್ದಾರೆ.

ಗುತ್ತಿಗೆ ನೌಕರನಾಗಿರುವ ಮೈನುದ್ದೀನ್, ಜನರಿಗೆ ತಪ್ಪು ಮಾಹಿತಿ ನೀಡಿ ದುಡ್ಡು ಮಾಡುತ್ತಿದ್ದ. ಇದೀಗ ಮೈನುದ್ದೀನ್ ಸೇರಿ ಈ ದಂಧೆಯಲ್ಲಿ ಶಾಮಿಲಾಗಿರುವ ಕಿಮ್ಸ್​ ಸಿಬ್ಬಂದಿ ವಿರುದ್ಧ ದೂರು ದಾಖಲಾಗಲಿದೆ. ಅಲ್ಲದೇ ಇನ್ಮುಂದೆ ಆ್ಯಂಬುಲೆನ್ಸ್ ಕಿಮ್ಸ್ ಆವರಣದಲ್ಲೇ ನಿಲ್ಲಲಿದೆ. ಅಲ್ಲದೇ ಕಿಮ್ಸ್ ಶವಾಗಾರದ ಉಚಿತ ಸೇವೆ ಕುರಿತು ನಾಮಫಲಕ ಕೂಡ ಹಾಕಲಾಗುತ್ತದೆ.

ಕೋವಿಡ್​ನಿಂದ ಮೃತಪಟ್ಟವರ ಮುಖ ನೋಡಲು, ಪೂಜೆ ಮಾಡಲು ಸಂಬಂಧಿಕರಿಗೆ ಕೊರೊನಾ ನಿಯಮಾವಳಿ ಪ್ರಕಾರ ಅವಕಾಶ ನೀಡಲಾಗುತ್ತದೆ. ಅಲ್ಲದೇ ಇದನ್ನ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧವೂ ಕ್ರಮತೆಗೆದುಕೊಳ್ಳಲಾಗುತ್ತದೆ.

ಕಿಮ್ಸ್​ನಲ್ಲಿ ನಡೆಯುತ್ತಿದ್ದ ಆ್ಯಂಬುಲೆನ್ಸ್ ದಂಧೆಯನ್ನ ನ್ಯೂಸ್ ಫಸ್ಟ್ ತಂಡ ಬಯಲಿಗೆ ಎಳೆದಿತ್ತು. ಕೋವಿಡ್-19 ನಿಂದ ಮೃತರ ಅಂತ್ಯಕ್ರಿಯೆ ವೇಳೆ ಕಿಮ್ಸ್ ಸಿಬ್ಬಂದಿ ಮತ್ತು ಖಾಸಗಿ ಆ್ಯಂಬುಲೆನ್ಸ್ ಸಿಬ್ಬಂದಿ ಸುಲಿಗೆ ಮಾಡುತ್ತಿರೋದು ಗೊತ್ತಾಗಿದೆ.

ಇದನ್ನೂ ಓದಿ: ನ್ಯೂಸ್​​ಫಸ್ಟ್​​ ಸ್ಟಿಂಗ್: ಹೆಣದ ಮೇಲೆ ಹಣ ಮಾಡೋ ಧನಪಿಶಾಚಿಗಳ ಕರಾಳಮುಖ ಬಯಲು

The post ಕಿಮ್ಸ್​​​ನಲ್ಲಿ ಹೆಣದ ಮೇಲೆ ಹಣ ಮಾಡೋ ದಂಧೆ; ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಸೂಚನೆ appeared first on News First Kannada.

Source: newsfirstlive.com

Source link