ಹುಬ್ಬಳ್ಳಿ: ಪ್ರಧಾನ‌ಮಂತ್ರಿ ನಿಧಿಯಿಂದ ಬಂದಿರುವ 27 ವೆಂಟಿಲೇಟರ್​ಗಳನ್ನ ಕಿಮ್ಸ್​ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದು ಒಪ್ಪಿಸಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವರು.. ಕಿಮ್ಸ್ ಆಸ್ಪತ್ರೆಗೆ ವೆಂಟಿಲೇಟರ್ ಅಗತ್ಯತೆ ಇರುವ ಹಿನ್ನೆಲೆಯಲ್ಲಿ 27 ವೆಂಟಿಲೇಟರ್​ಗಳನ್ನ ಹಸ್ತಾಂತರಿಸಲಾಗಿದೆ. ಪ್ರಧಾನ ಮಂತ್ರಿ ನಿಧಿಯಿಂದ‌ ಈ ವೆಂಟಿಲೇಟರ್​ಗಳನ್ನ ಹಸ್ತಾಂತರಿಸಲಾಗುತ್ತಿದೆ. ರಾಜ್ಯಕ್ಕೆ‌‌ ನಿನ್ನೆ 2 ಲಕ್ಷಕ್ಕಿಂತಲೂ ಅಧಿಕ ವ್ಯಾಕ್ಸಿನ್​ಗಳು ಬಿಡುಗಡೆಯಾಗಿದೆ. ಹಂತ ಹಂತವಾಗಿ ಜುಲೈ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನ್ ಬರಲಿದೆ ಅಂತಾ ಭರವಸೆಯನ್ನ ನೀಡಿದರು.

May be an image of one or more people and people standing

ಕಾಂಗ್ರೆಸ್​ನವರು ವ್ಯಾಕ್ಸಿನ್ ಬಗ್ಗೆ ಸಾಕಷ್ಟು ಟೀಕೆ‌ ಮಾಡಿದ್ದರು. ವ್ಯಾಕ್ಸಿನ್ ಬಗ್ಗೆ 58 ಬಾರಿ ಹೇಳಿಕೆಗಳನ್ನ ಕೊಟ್ಟಿದ್ದಾರೆ. ಕಾಂಗ್ರೆಸ್ ಆ ರೀತಿಯ ಹೇಳಿಕೆಗಳನ್ನ ನೀಡದಿದ್ದಲ್ಲಿ ಜನರಲ್ಲಿ ವ್ಯಾಕ್ಸಿನ್ ಬಗ್ಗೆ ತಪ್ಪು ಸಂದೇಶ ಹೋಗುತ್ತಿರಲಿಲ್ಲ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್​ನವರು ಬೇಜಾವಾಬ್ದಾರಿತನ‌ದ ಹೇಳಿಕೆಗಳನ್ನ ನೀಡಿದ್ದಾರೆ.

No photo description available.

ಇವರಿಗೆ ರಾಜಕಾರಣ ಮಾಡುವುದಕ್ಕೆ ಒಂದು ವಿಷಯ ಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್ ಈ ರೀತಿಯ ಹೇಳಿಕೆಗಳನ್ನ ನೀಡಿದೆ. ಪ್ರಧಾನ‌ಮಂತ್ರಿ ನಿಧಿಯಿಂದ ಬಂದಿರುವ ವೆಂಟಿಲೇಟರ್ ಬಗ್ಗೆ ಕೂಡ ಹುಚ್ಚು ಹುಚ್ಚಾಗಿ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡೋದು ದುರಂತ. ರಾಹುಲ್ ಗಾಂಧಿಯವರ ಮಾತು ಯಾಕೆ ಕೇಳ್ತೀರಾ? ಒಳ್ಳೆಯ ಜ್ಞಾನ‌ ಇದ್ದವರ ಮಾತು ಕೇಳೋದು ಉತ್ತಮ ಎಂದು ರಾಹುಲ್‌ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ರು.

The post ಕಿಮ್ಸ್​ ಆಸ್ಪತ್ರೆಗೆ ಕೇಂದ್ರ ಸರ್ಕಾರದ 27 ವೆಂಟಿಲೇಟರ್​ ಒಪ್ಪಿಸಿದ ಪ್ರಹ್ಲಾದ್ ಜೋಶಿ appeared first on News First Kannada.

Source: newsfirstlive.com

Source link