ಕಿರಿಕ್​​ನಲ್ಲಿ ತಗ್ಲಾಕೊಂಡ ಶ್ರೀಕಿ.. ಭೀಮಾ ಜ್ಯುವೆಲ್ಸ್ ಮಾಲೀಕನ ಪುತ್ರ ವಿಷ್ಣುಭಟ್ ಅರೆಸ್ಟ್


ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರ ಸದ್ದು ಮಾಡ್ತಾನೆ ಇದೆ. ಇದರ ನಡುವೆ ಇ.ಡಿ ವಿಚಾರಣೆ ಬೆನ್ನಲ್ಲೇ ಮನೆ ಬಿಟ್ಟಿದ್ದ ಶ್ರೀಕಿ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಇಡಿ ವಿಚಾರಣೆ ವೇಳೆ ನನ್ನನ್ನ ಯೂಸ್ ಮಾಡ್ಕೊಂಡು ದುಡ್ಡು ಮಾಡ್ಕೊಳ್ತಿದ್ರು ಅಂತ ಶ್ರೀಕೃಷ್ಣ ಬಾಯಿಬಿಟ್ಟಿದ್ದ. ಇದೀಗ, ಆ ಮಾತಿಗೆ ಪುಷ್ಠಿ ನೀಡುವಂತೆ, ಗಲಾಟೆ ಒಂದರಲ್ಲಿ ಶ್ರೀಕಿ, ಪೊಲೀಸರ ಬಲೆಯಲ್ಲಿ ಬಿದ್ದಿದ್ದಾನೆ.

ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಕಿರಿಕ್ ಕೇಸ್ ಒಂದರಲ್ಲಿ ತಗ್ಲಾಕೊಂಡಿದ್ದಾನೆ. ಆದ್ರಿಲ್ಲಿ, ಹ್ಯಾಕರ್ ಶ್ರೀಕಿ ಗಲಾಟೆ ಮಾಡಿದ್ದಲ್ಲ. ಬದಲಾಗಿ, ತನ್ನನ್ನ ನೋಡಲು ಬಂದಿದ್ದ ಭೀಮಾ ಜ್ಯುವೆಲ್ಸ್ ಮಾಲೀಕನ ಪುತ್ರ ವಿಷ್ಣುಭಟ್ ಪುಂಡಾಟದಿಂದ ಶ್ರೀಕಿ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಶ್ರೀಕಿ ವಾಸವಿದ್ದ ರೂಮಿನಲ್ಲಿದ್ದ 3 ಲ್ಯಾಪ್​​ಟಾಪ್ ಪೊಲೀಸರ ವಶಕ್ಕೆ
ಕಳೆದ ಎರಡೂವರೆ ತಿಂಗಳಿಂದ ಸ್ಟಾರ್ ಹೋಟೆಲ್​ನಲ್ಲಿ ವಾಸವಿದ್ದ ಶ್ರೀಕಿ. ಗೆಳೆಯನ ಸಹಾಯದಿಂದ ಹೋಟೆಲ್ ಬುಕ್​​ ಮಾಡಿಕೊಂಡಿದ್ದ. ಕಳೆದ 3 ದಿನಗಳ ಹಿಂದೆ ಜ್ಯುವೆಲ್ಲರಿ ಗ್ರೂಪ್ಸ್ ಮಾಲೀಕನ ಮಗ ಕೃಷ್ಣನ ಜೊತೆಗಿದ್ದ. ಆದ್ರಿಂದು, 5 ಸ್ಟಾರ್ ಹೋಟೆಲ್​​ನಲ್ಲಿ ಪೊಲೀಸರ ಬಲೆಗೆ ಶ್ರೀಕೃಷ್ಣ ಬಿದ್ದಿದ್ದಾನೆ. ಹ್ಯಾಕರ್ ಶ್ರೀಕಿ ಭೇಟಿಗೆ ಬಂದಿದ್ದ ಜ್ಯುವೆಲ್ಲರಿ ಶಾಪ್ ಮಾಲೀಕ ವಿಷ್ಣುಭಟ್, ಸೆಕ್ಯುರಿಟಿ ಆಫೀಸರ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಹ್ಯಾಕರ್ ಶ್ರೀಕಿ ಮೇಲೂ ವಿಷ್ಣು ಭಟ್ ಹಲ್ಲೆಗೆ ಮುಂದಾಗಿದ್ರಂತೆ. ಕೂಡಲೇ ಜೆ.ಬಿ ನಗರ ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಹೋಟೆಲ್​ಗೆ ಬಂದ ಜೀವನ್​ ಭೀಮಾನಗರ ಪೊಲೀಸರು, ಶ್ರೀಕೃಷ್ಣ ಹಾಗೂ ವಿಷ್ಣು ಭಟ್​ನನ್ನು ವಶಕ್ಕೆ ಪಡೆದಿದ್ದಾರೆ. ಶ್ರೀಕಿ ವಾಸವಿದ್ದ ರೂಮಿನಲ್ಲಿದ್ದ 3 ಲ್ಯಾಪ್​​ಟಾಪ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ, ಹ್ಯಾಕರ್ ಶ್ರೀಕಿ ಜೊತೆ ಸೇರಿ ಭೀಮಾ ಜ್ಯುವೆಲ್ಸ್ ಮಾಲೀಕನ ಪುತ್ರ ವಿಷ್ಣುಭಟ್ ಸಹ ಹ್ಯಾಕ್ ಮಾಡಿರೋ ಶಂಕೆ ವ್ಯಕ್ತವಾಗಿದೆ. ಗಲಾಟೆ ಮತ್ತು ಅಸಭ್ಯ ವರ್ತನೆ ತೋರಿದ್ದ ವಿಷ್ಣು ಭಟ್ ಹಾಗೂ ಶ್ರೀಕೃಷ್ಣನ ವಿಚಾರಣೆ ಮುಂದುವರೆದಿದೆ. ಶ್ರೀಕಿ ಜೊತೆ ಭೀಮಾ ಜ್ಯುವೆಲ್ಸ್ ಮಾಲೀಕನ ಪುತ್ರನ ಪುಂಡಾಟದ ಕೇಸ್ ಕೂಡ ತಳುಕು ಹಾಕಿಕೊಂಡಿದ್ದು, ಈ ಕೇಸ್‌ನಲ್ಲಿ ಮುಂದೇನಾಗುತ್ತೋ ಅನ್ನೋ ಕುತೂಹಲವಂತೂ ಇನ್ನೂ ಇದೆ.

News First Live Kannada


Leave a Reply

Your email address will not be published. Required fields are marked *