ಕಿರಿಕ್ ಕೀರ್ತಿ
ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದ ಪಬ್ನಲ್ಲಿ ಈ ಘಟನೆ ನಡೆದಿದೆ. ಗುರುವಾರ (ಡಿ.2) ರಾತ್ರಿ ಸ್ನೇಹಿತರ ಜತೆ ಕಿರಿಕ್ ಕೀರ್ತಿ ಅವರು ಪಬ್ಗೆ ತೆರಳಿದ್ದರು. ಪಕ್ಕದ ಟೇಬಲ್ನಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದ. ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದ್ದಾರೆ. ಆ ಕಾರಣಕ್ಕೆ ಜಗಳ ಆರಂಭ ಆಯಿತು. ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಕ್ಷಮೆ ಕೇಳಿದ್ರೂ ಕೂಡ ಬಿಡದೇ ಕೀರ್ತಿ ಬೈಯ್ಯಲು ಶುರು ಮಾಡಿದ್ದರು. ಬಾಯಿಗೆ ಬಂದಂತೆ ಮಾತನಾಡಿದ್ದ ಕಿರಿಕ್ ಕೀರ್ತಿ ವರ್ತನೆಗೆ ಆ ವ್ಯಕ್ತಿ ರೋಸಿ ಹೋಗಿದ್ದ. ಫೋಟೋ ಕ್ಲಿಕ್ಕಿಸಿದವನ ಮೊಬೈಲ್ ಕಸಿದುಕೊಳ್ಳಲು ಕೂಡ ಕೀರ್ತಿ ಪ್ರಯತ್ನಿದರು. ಇದರಿಂದ ಕೋಪಗೊಂಡ ಆ ವ್ಯಕ್ತಿಯು ಕಿರಿಕ್ ಕೀರ್ತಿಯ ತಲೆಗೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾನೆ.
ಗುರುವಾರ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.