ಕಿರಿಕ್ ಪಾರ್ಟಿ ಸಿನಿಮಾದ ಹಾಡಿನ ಸಂಬಂಧ ಕಾಪಿರೈಟ್ಸ್​ ವಿವಾದ ಕೊನೆಗೂ ಇತ್ಯರ್ಥವಾಗಿದೆ. ಲಹರಿ ಕಂಪನಿ ಹಾಗೂ ನಟ ರಕ್ಷಿತ್ ಶೆಟ್ಟಿ ರಾಜಿಯಾಗಿದ್ದಾರೆ.

ಈ ಹಿಂದೆ ಲಹರಿ ಕಂಪನಿ ಕಿರಿಕ್ ಪಾರ್ಟಿ ಹಾಡೊಂದರ ಬಗ್ಗೆ ಕಾಪಿರೈಟ್ಸ್ ಆ್ಯಕ್ಟ್ ಅಡಿ ಕೇಸ್ ಹಾಕಿತ್ತು. ಈ ಸಂಬಂಧ ಚರ್ಚಿಸಲು ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಖಾಸಗಿ ಹೋಟೆಲ್ ಒಂದರಲ್ಲಿ ಲಹರಿ ಕಂಪನಿಯ ಮುಖ್ಯಸ್ಥರಲ್ಲೊಬ್ಬರಾದ ಲಹರಿ ವೇಲು ಅವರನ್ನ ಭೇಟಿ ಮಾಡಿದ್ದರು. ಇದೀಗ ಲಹರಿ ಸಂಸ್ಥೆ ಪ್ರಕರಣವನ್ನ ಹಿಂಪಡೆದಿದೆ.

ಚಿತ್ರರಂಗದ ಹಿತದೃಷ್ಟಿಯಿಂದ ಲಹರಿ ಕಂಪನಿ ಸೌಹಾರ್ದತಯುತವಾಗಿ ಪ್ರಕರಣವನ್ನ ವಾಪಸ್ ಪಡೆದಿದೆ ಅಂತ ಲಹರಿ ವೇಲು ನ್ಯೂಸ್ ಫಸ್ಟ್​​ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ನಾಯಕ ನಟ ಕಮ್ ನಿರ್ಮಾಪಕ ರಕ್ಷಿತ್ ಶೆಟ್ಟಿ ವೇಲು ಅವರ ಭೇಟಿಯ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಘಟನೆ.. ಹಲವು ದೃಷ್ಟಿಕೋನ. ನಮ್ಮ ದೃಷ್ಟಿಕೋನಗಳನ್ನ ಹಂಚಿಕೊಂಡು ಅರ್ಥ ಮಾಡಿಕೊಂಡಾಗ, ನಾವು ಮಾನವರಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ ಅಂತ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

The post ಕಿರಿಕ್ ಪಾರ್ಟಿ ಹಾಡಿನ ಕಾಪಿರೈಟ್ಸ್ ವಿವಾದ ಇತ್ಯರ್ಥ: ಕೇಸ್​ ಹಿಂಪಡೆದ ಲಹರಿ ಕಂಪನಿ appeared first on News First Kannada.

Source: newsfirstlive.com

Source link