ಘಂಟಾ ನವೀನ್ ಬಾಬು ಅಂತ ಹೇಳಿದರೆ, ಯಾರದು? ಅಂತ ಕೇಳುವ ಸಾಧ್ಯತೆಯೇ ಜಾಸ್ತಿ. ಅದೇ ನಾನಿ ಅಂದರೆ, ಓ ತೆಲುಗು ಚಿತ್ರರಂಗದ ಜನಪ್ರಿಯ ನಟ ಅಂತ ತಟ್ಟನೇ ಹೇಳಿಬಿಡ್ತೀರಿ, ಹೌದು ತಾನೆ. 37 ವರ್ಷ ವಯಸ್ಸಿನ ನಾನಿ ಟಾಲಿವುಡ್ ನಲ್ಲಿ ಈಗ ಬಹಳ ಬ್ಯೂಸಿ ನಟ. 2008 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇದುವರೆಗೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗುವ ಮೊದಲು ಅವರು ಕಿರುತೆರೆಯಲ್ಲಿ ನಿರೂಪಕನಾಗಿ ಕೆಲಸ ಮಾಡಿದ್ದರು. ಅದಾದ ಮೇಲೆ ಕೆಲ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ಮೊದಲೇ ಅವರು ತೆಲುಗು ಬಿಗ್ ಬಾಸ್ ಸೀಸನ್ 2 ಹೋಸ್ಟ್ ಮಾಡಿದ್ದರು.
ತೆಲುಗು ಇಡಸ್ಟ್ರೀಯಲ್ಲಿ ನಾನಿ ತಮ್ಮ ಸಹಜ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. ಹಾಗಾಗೇ ಅವರಿಗೆ ನ್ಯಾಚುರಲ್ ಆ್ಯಕ್ಟರ್ ಎಂಬ ಬಿರುದು ಸಿಕ್ಕಿದೆ. ನಾನಿ ಹೇಳಿಕೊಳ್ಳುವಂಥ ಫ್ಯಾಶನ್ ಪ್ರಿಯರೇನೂ ಅಲ್ಲ, ಅದರೆ ಯಾವುದೇ ಉಡುಗೆ ತೊಟ್ಟರೂ ಚೆನ್ನಾಗಿ ಕಾಣುತ್ತಾರೆ ಅಂತ ಜನ ಮಾತಾಡಿಕೊಳ್ಳುತ್ತಾರೆ. ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ, ಸೂಟ್ನಲ್ಲಿ ಅಂದವಾಗಿ ಕಂಡಹಾಗೆ ಪಂಚೆಯಲ್ಲೂ ಓಕೆ ಅನಿಸುತ್ತಾರೆ.
ನಾನಿ ಅವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ನಂದಿ, ಫಿಲ್ಮ್ ಫೇರ್ ಹಾಗೂ ಸೈಮಾ ಪ್ರಶಸ್ತಿಗಳು ಸೇರಿದಂತೆ ಇದುವರೆಗೆ 13ಕ್ಕಿಂತ ಹೆಚ್ಚು ಅವಾರ್ಡ್ಗಳನ್ನು ಅವರು ಗಳಿಸಿದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ ಮೂರು ಚಿತ್ರಗಳಿವೆ.
ಇದನ್ನೂ ಓದಿ: ಖ್ಯಾತ ನಟನಿಗೆ ಇದೆಂಥಾ ಗತಿ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್