ಕಿರುತೆರೆಯ ಮೇಲೆ ಮತ್ತೆ ಶುರುವಾಗಲಿದೆ ಮಕ್ಕಳ ಕಲರವ.. ‘ಡ್ರಾಮಾ ಜ್ಯೂನಿಯರ್ಸ್’ಗೆ ಟೈಂ ಫಿಕ್ಸ್


ಕಿರುತೆರೆಯಲ್ಲಿ ವಿಭಿನ್ನವಾದ ರಿಯಾಲಿಟಿ ಶೋಗಳಿಗೇನು ಕಮ್ಮಿ ಇಲ್ಲ. ವೀಕೆಂಡ್ ಬಂತಂದ್ರೆ ಸಾಕು ಕಿರುತೆರೆಯ ಲೋಕದಲ್ಲಿ ರಿಯಾಲಿಟಿ ಶೋಗಳದ್ದೆ ಕಾರುಬಾರು. ಲೆಕ್ಕವಿಲ್ಲದಷ್ಟು ರಿಯಾಲಿಟಿ ಶೋಗಳು ಕರ್ನಾಟಕದ ಜನತೆಯನ್ನ ಮನರಂಜಿಸಿವೆ. ಹಲವಾರು ಶೋಗಳು ಇದಿಂಗೂ ಕರ್ನಾಟಕದ ಮನೆಮಾತಾಗಿವೆ.

ಇನ್ನೂ ಹಲವು ರಿಯಾಲಿಟಿ ಶೋಗಳು ವೀಕ್ಷಕರ ಒತ್ತಾಯದ ಮೇರೆಗೆ ಇಂದಿಗೂ ಸೀಸನ್ ಮೇಲೆ ಸೀಸನ್ ಬರ್ತಾನೆ ಇದ್ದಾವೆ. ಇದೇ ರೀತಿ ವೀಕ್ಷಕರಿಗೆ ಇಷ್ಟವಾಗಿರೊ ರಿಯಾಲಿಟಿ ಶೋಗಳ ಪೈಕಿಯಲ್ಲಿ ‘ಡ್ರಾಮ ಜೂನಿಯರ್ಸ್’ ಕೂಡ ಒಂದು. ಡ್ರಾಮ ಜೂನಿಯರ್ಸ್ ಶೋ, ಮಕ್ಕಳಿಗೊಸ್ಕರನೆ ಇರುವಂತ ಒಂದು ವಿಭಿನ್ನ ರಿಯಾಲಿಟಿ ಶೋ. ಇಲ್ಲಿ ಮಕ್ಕಳದ್ದೆ ಆಳ್ವಿಕೆ. ಮಕ್ಕಳ ಪ್ರತಿಭೆಗೆ ಹೇಳಿ ಮಾಡಿಸಿದ ವೇದಿಕೆ ಇದು. ಇಗಾಗಲೇ ಡ್ರಾಮಾ ಜೂನಿಯರ್ಸ್ ಮೂರು ಆವೃತ್ತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈಗ ನಾಲ್ಕನೇ ಆವೃತ್ತಿಯ ಹೊಸ್ತಿಲಲ್ಲಿದೆ. ಪ್ರತಿಬಾರಿ ಇದ್ದ ಹಾಗೆ, ಈ ಬಾರಿಯು ಮಾಸ್ಟರ್ ಆನಂದ್ ಅವರು ಈ ಶೋನ ಸಾರಥಿಯಾಗಲ್ಲಿದ್ದಾರೆ.

ಈ ಮೂರು ಆವೃತ್ತಿಯಲ್ಲಿ ಬಹಳಷ್ಟು ಪ್ರತಿಭೆಗಳನ್ನ ಕೊಟ್ಟಂತ ವೇದಿಕೆ ಡ್ರಾಮಾ ಜೂನಿಯರ್ಸ್​.ಪ್ರತಿ ಸೀಸನ್​ನಲ್ಲಿ ಬಂದ ಮಕ್ಕಳನ್ನು ಇದಿಂಗೂ ವೀಕ್ಷಕರು ನೆನಪಿಸಿಕೊಳ್ಳುತ್ತಾರೆ. ಹಲವಾರು ಮಕ್ಕಳು ಇದಿಂಗೂ ಎಲ್ಲರ ಮನೆ ಮಾತಾಗಿದ್ದಾರೆ.ಸದ್ಯ, ಹೊಸ ಆವೃತ್ತಿಯೊಂದಿಗೆ ಎಂಟ್ರಿ ಕೊಟ್ಟಿರೊ ಡ್ರಾಮಾ ಜೂನಿಯರ್ಸ್ ವೀಕ್ಷಕರನ್ನು ಮನರಂಜಿಸಲು ಎಲ್ಲಾ ರೀತಿಯಲ್ಲು ಸಜ್ಜಾಗಿದೆ. ಇಗಾಗಲೇ ಶೋನ ಪ್ರೋಮೊ ಹೊರಬಿದಿದ್ದು ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಬಾರಿ ಯಾವ ತರಹದ ಪ್ರತಿಭೆಗಳು ಬರುತ್ತಾರೆ, ಏನೆಲ್ಲಾ ತರ್ಲೆ ಮಾಡ್ತಾರೆ ಎನ್ನುವುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಜೀ ಕನ್ನಡ, ಈಗ ಡ್ರಾಮಾ ಜೂನಿಯರ್ಸ್​ ಹೊಸ ಆವೃತ್ತಿಯ ಮೂಲಕ, ಇದೇ ಸಮ್ಮರ್​ನಲ್ಲಿ​ ನಿಮ್ಮ ಮನೆಗೆ ಬರಲಿದೆ. ಎಲ್ಲಾ ಆವೃತ್ತಿಯಂತೆ ಈ ಆವೃತ್ತಿಯು ಯಶಸ್ವಿಯಾಗಲಿ ಎಂಬುದೆ ನಮ್ಮ ಆಶಯ.

News First Live Kannada


Leave a Reply

Your email address will not be published.