ಕಿರುತೆರೆ ನಟನ ಜತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಆ್ಯಂಕರ್; ವೈರಲ್ ಆಯ್ತು ಫೋಟೋ | TV Actor Navin Kumar Engaged with Sun TV News Anchor Kanmani Sekar


ಕಿರುತೆರೆ ನಟನ ಜತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಆ್ಯಂಕರ್; ವೈರಲ್ ಆಯ್ತು ಫೋಟೋ

ನವೀನ್​-ಕಣ್ಮಣಿ

ಕಿರುತೆರೆ ಲೋಕ (Tv Industry) ಈಗ ಹಿರಿತೆರೆ ಲೋಕದಷ್ಟೇ ದೊಡ್ಡದಾಗಿ ಬೆಳೆದು ನಿಂತಿದೆ. ಇಲ್ಲಿ ನಟಿಸುವ ಕಲಾವಿದರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳಿಗೆ ಇರುತ್ತದೆ. ಈಗ ತಮಿಳಿನ ಕಿರುತೆರೆ ನಟ ನವೀನ್ ಕುಮಾರ್ ಅವರ ನಿಶ್ಚಿತಾರ್ಥ (Engagment) ನೆರವೇರಿದೆ. ಖ್ಯಾತ ಟಿವಿ ಆ್ಯಂಕರ್ ಕಣ್ಮಣಿ ಶೇಖರ್ (Kanmani Sekhar) ಜತೆ ನವೀನ್ ಕುಮಾರ್ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಈ ಜೋಡಿಗಳಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಈ ನಿಶ್ಚಿತಾರ್ಥ ತುಂಬಾನೇ ಗುಟ್ಟಾಗಿ ನಡೆದಿದೆ. ಕುಟುಂಬದ ಕೆಲವೇ ಕೆಲವು ಸದಸ್ಯರು ಹಾಗೂ ಗೆಳೆಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಕೆಲ ದಿನಗಳಿಂದ ಈ ವಿಚಾರದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ, ಇದನ್ನು ಅವರು ಖಚಿತ ಮಾಡಿರಲಿಲ್ಲ. ಈಗ ಪೋಟೋ ಹಂಚಿಕೊಳ್ಳುವ ಮೂಲಕ ಎಂಗೇಜ್​ಮೆಂಟ್ ವಿಚಾರವನ್ನು ಖಚಿತಪಡಿಸಿದ್ದಾರೆ.

ಕಣ್ಮಣಿ ಅವರು ಎಂಗೇಜ್​ಮೆಂಟ್ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಣ್ಮಣಿ ಅವರು ಕೆಂಪು ಸೀರೆ ಉಟ್ಟಿದ್ದಾರೆ. ನವೀನ್ ಕುಮಾರ್ ಅವರು ಬಿಳಿ ಶರ್ಟ್ ತೊಟ್ಟು, ಅದಕ್ಕೆ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇಬ್ಬರೂ ಸಖತ್ ಖುಷಿಯಿಂದ ಫೋಟೋಗೆ ಪೋಸ್​ ನೀಡಿದ್ದಾರೆ.

ಈ ಫೋಟೋಗೆ ಕಣ್ಮಣಿ ಅವರು ‘ಖುಷಿಯಿಂದ ನಿಶ್ಚಿತಾರ್ಥ ಮಾಡಿಕೊಂಡೆ’ ಎನ್ನುವ ಅಡಿಬರಹ ಬರೆದು, ರೆಡ್ ಹಾರ್ಟ್ ಹಾಗೂ ಉಂಗುರದ ಎಮೋಜಿ ಹಾಕಿದ್ದಾರೆ. ಈ ಫೋಟೋ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಕಣ್ಮಣಿ ಎಂಗೇಜ್​ಮೆಂಟ್ ಮಾಡಿಕೊಳ್ಳುತ್ತಿರುವ ರೀಲ್ಸ್​ಅನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಈ ಜೋಡಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಕಣ್ಮಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಸುಮಾರು 5 ಲಕ್ಷ ಹಿಂಬಾಲಕರಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗುತ್ತಲೇ ಇದೆ. ‘ಇಧಯಥೈ ತಿರುಡಥೆ’ ಧಾರಾವಾಹಿ ಮೂಲಕ ನವೀನ್ ಜನಪ್ರಿಯತೆ ಪಡೆದುಕೊಂಡಿದ್ದಾರೆ.

TV9 Kannada


Leave a Reply

Your email address will not be published.