ಕಿರುತೆರೆ ವೀಕ್ಷಕರಿಗೆ ಹಬ್ಬ; ಸ್ವೀಟ್ ನ್ಯೂಸ್ ಕೊಟ್ಟಿದೆ ಹಿರಿತೆರೆ ಹಿಟ್ ಜೋಡಿ..!


ಕನ್ನಡ ಸೀರಿಯಲ್‌ ಇಂಡಸ್ಟ್ರಿಯ ಕ್ವಾಲಿಟಿ ಹೈ ಇದೆ. ಮೊದಲಿನಂತೆ ಸೀರಿಯಲ್ ಅಂದ್ರೆ ಮೂಗು ಮುರಿಯೋ ಕಾಲ ಹೋಯ್ತು. ಈಗ ಮತ್ತೆ ಜನರು ಮಾತಾನಾಡೋ ಸಮಯ ಬಂದಿದೆ. ಯಾಕಂದ್ರೆ, ಅಂದುಕೊಂಡಂತೆ ನಡೆದ್ರೆ ಸ್ಯಾಂಡಲ್‌ವುಡ್‌ನ ತಾರೆಯರು ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡೋ ಸಾಧ್ಯತೆ ಇದೆ. ಅಂದ್ಹಾಗೇ, ಅವಱರು ಅಂದ್ರೇ, ನಟ ರಾಮ್‌ಕುಮಾರ್ ಮತ್ತು ನಟಿ ಶ್ರುತಿ.

ಹೌದು, ಹೀಗೊಂದು ಮಾತುಕತೆ ಇಂಡಸ್ಟ್ರಿ ಒಳಗಡೆ ನಡೆಯುತ್ತಿದೆ. ಜ್ಹೀ ಕನ್ನಡದಲ್ಲಿ ಪ್ರಸಾರವಾಗುತ್ತೆ ಅಂತಾ ಹೇಳಲಾಗ್ತಿರೋ ಸೀರಿಯಲ್‌ನಲ್ಲಿ ರಾಮ್‌ಕುಮಾರ್‌ ಮತ್ತು ಶ್ರುತಿ ನಟಿಸುತ್ತಿದ್ದಾರೆ ಅಂತಾ ಹೇಳಲಾಗ್ತಿದೆ.

ಅಂದ್ಹಾಗೇ, ಈ ಮೊದಲು ರಾಮ್‌ಕುಮಾರ್ ಮತ್ತು ಶ್ರುತಿ ಅವರು ನಟಿಸಲಿರುವ ಧಾರವಾಹಿಯನ್ನ ರಾಮ್‌ ಜೀ ಅವರು ನಿರ್ಮಾಣ ಮಾಡಬೇಕಿತ್ತು. ಆದ್ರೆ, ಈಗ ಈ ಧಾರವಾಹಿಯ ನಿರ್ಮಾಣದ ಹೊಣೆಯನ್ನ ಇನ್ನೊಂದು ಪ್ರೊಡಕ್ಷನ್‌ ಹೌಸ್‌ಗೆ ಕೊಡಲಾಗಿದೆ. ಶ್ರುತಿ ಮತ್ತು ರಾಮ್‌ಕುಮಾರ್‌ ಅವರದ್ದು ಹಿಟ್‌ ಜೋಡಿ. ಅವರಿಬ್ಬರು ಅಭಿನಯಿಸಿದ ಹಲವು ಸಿನಿಮಾಗಳನ್ನ ಜನರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ತವರಿನ ತೊಟ್ಟಿಲು ಚಿತ್ರದ ಜನ ಇವತ್ತಿಗೂ ಮಾತನಾಡುತ್ತಾರೆ.

ರಾಮ್‌ ಕುಮಾರ್ ಮತ್ತು ಶ್ರುತಿ ಅವರ ಸೀರಿಯಲ್‌ನ ಪ್ರೊಮೋ ಸದ್ಯದಲ್ಲೇ ಲಾಂಚ್ ಆಗ್ಲಿದೆ ಎನ್ನಲಾಗ್ತಿದೆ. ಜೊತೆಗೆ ಇದು ಮರಾಠಿ ಸೀರಿಯಲ್‌ನ ರಿಮೇಕ್ ಅನ್ನೋ ಚರ್ಚೆಯೂ ನಡೀತಿದೆ. ಹೀಗೇ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿರುವ ರಾಮ್‌ಕುಮಾರ್ ಮತ್ತು ಶ್ರುತಿ ಜೋಡಿ ಕಿರುತೆರೆಗೆ ಬಂದ್ರೆ ಜನರು ಇಷ್ಟಪಡೋದ್ರಲ್ಲಿ ಸಂದೇಹವಿಲ್ಲ.

News First Live Kannada


Leave a Reply

Your email address will not be published.