ಕಿರುತೆರೆ ಸೀರಿಯಲ್ ನಿರ್ದೇಶಕ ಅರವಿಂದ್​ ಕೌಶಿಕ್​ ಬಂಧನ: ನಿರ್ಮಾಪಕರಿಗೆ 73 ಲಕ್ಷ ರೂ. ವಂಚಿಸಿದ ಆರೋಪ | Kamali serial director Aravind Kaushik arrested in cheating case


ಕಿರುತೆರೆ ಸೀರಿಯಲ್ ನಿರ್ದೇಶಕ ಅರವಿಂದ್​ ಕೌಶಿಕ್​ ಬಂಧನ: ನಿರ್ಮಾಪಕರಿಗೆ 73 ಲಕ್ಷ ರೂ. ವಂಚಿಸಿದ ಆರೋಪ

ಅರವಿಂದ್ ಕೌಶಿಕ್

ಕನ್ನಡದ ಸಿನಿಮಾ ಹಾಗೂ ಧಾರಾವಾಹಿ ನಿರ್ದೇಶಕ ಅರವಿಂದ್​ ಕೌಶಿಕ್ (Director Aravind Kaushik) ಅವರನ್ನು ಬಂಧಿಸಲಾಗಿದೆ. ವಂಚನೆ (Cheating Case) ಆರೋಪದ ಅಡಿಯಲ್ಲಿ ಬೆಂಗಳೂರಿನ ವೈಯಾಲಿಕಾವಲ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರಾವಾಹಿ ನಿರ್ಮಾಪಕನಿಂದ ಹಣ ಪಡೆದು ವಂಚನೆ ಮಾಡಿದ ಆರೋಪ ಅರವಿಂದ್​ ಕೌಶಿಕ್​ ಅವರ ಮೇಲಿದೆ. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲೂ ನಿರ್ದೇಶನ ಮಾಡಿದ್ದ ಅರವಿಂದ ಕೌಶಿಕ್​ ಈಗ ಈ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ನಮ್ ಏರಿಯಾಲ್ ಒಂದಿನ’, ‘ಹುಲಿರಾಯ’, ‘ಶಾರ್ದೂಲ’, ‘ತುಘಲಕ್’ ಮುಂತಾದ​ ಸಿನಿಮಾಗಳನ್ನು ಅವರು​ ನಿರ್ದೇಶನ ಮಾಡಿದ್ದಾರೆ. ‘ಕಮಲಿ’ (Kamali Serial) ಧಾರಾವಾಹಿಗೆ ಆ್ಯಕ್ಷನ್​-ಕಟ್​ ಹೇಳಿದ್ದ ಅವರು, ರೋಹಿತ್ ಅವರಿಂದ ಧಾರಾವಾಹಿ ನಿರ್ಮಿಸಲು 73 ಲಕ್ಷ ರೂಪಾಯಿ ಹಣ ಪಡೆದಿದ್ದರು. ಆದರೆ ಆ ಹಣ ವಾಪಸ್​ ನೀಡಿದೇ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅರವಿಂದ್​ ಕೌಶಿಕ್​ ಈಗ ಪೊಲೀಸರ ಅತಿಥಿ ಆಗಿದ್ದಾರೆ.

2018ರಲ್ಲಿ ಧಾರಾವಾಹಿ ನಿರ್ಮಾಣಕ್ಕೆ ರೋಹಿತ್​ ಅವರು ಹಣ ಹೂಡಿದ್ದರು. ಈವರೆಗೂ ಹಣ ಹಿಂದಿರುಗಿಸದೆ, ಲಾಭಾಂಶ ಕೂಡ ನೀಡದೇ ಅರವಿಂದ್​ ಕೌಶಿಕ್​ ವಂಚಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವೈಯಾಲಿಕಾವಲ್​ ಠಾಣೆಗೆ ನಿರ್ಮಾಪಕ ರೋಹಿತ್​ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 506, 420ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

TV9 Kannada


Leave a Reply

Your email address will not be published.