ಕಿವೀಸ್​​​ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ.. ರೋಹಿತ್​ ನಾಯಕ, KL ರಾಹುಲ್ ಉಪನಾಯಕ


ನವೆಂಬರ್​ 17 ರಿಂದ ನ್ಯೂಜಿಲೆಂಡ್​​​ ವಿರುದ್ಧ ಆರಂಭವಾಗಲಿರುವ ಟಿ-20 ಸರಣಿಗೆ ಬಿಸಿಸಿಐ 16 ಸದಸ್ಯರ ಯುವ ತಂಡವನ್ನು ಪ್ರಕಟಿಸಿದೆ. ರೋಹಿತ್​ ಶರ್ಮಾಗೆ ನಾಯಕ ಪಟ್ಟ ಒಲಿದು ಬಂದಿದ್ದು, ಕೆ.ಎಲ್​.ರಾಹುಲ್​ಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ.

ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಕೊಹ್ಲಿ, ಶಮಿ, ಬೂಮ್ರಾ, ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಆ ಮೂಲಕ ಕಿವೀಸ್​ ಸರಣಿಗೆ ಯುವ ಶಕ್ತಿ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಿದೆ.

ತಂಡ ಇಂತಿದೆ: ರೋಹಿತ್​ (ನಾಯಕ), ರಾಹುಲ್​​ (ಉಪನಾಯಕ), ಗಾಯಕ್ವಾಡ್, ಶ್ರೇಯಸ್, ಸೂರ್ಯಕುಮಾರ್, ರಿಷಬ್ ಪಂತ್ (ವಿಕೀ), ಇಶಾನ್ ಕಿಶನ್ (ವಿಕೀ), ವೆಂಕಟೇಶ್ ಅಯ್ಯರ್, ಚಹಲ್, ಅಶ್ವಿನ್, ಅಕ್ಷರ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್​ ಸಿರಾಜ್..

News First Live Kannada


Leave a Reply

Your email address will not be published.