ನ್ಯೂಜಿಲೆಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ಟೀಂ ಅನೌನ್ಸ್ ಮಾಡಿದೆ. 16 ಸದಸ್ಯರ ತಂಡ ಅನೌನ್ಸ್ ಮಾಡಲಾಗಿದ್ದು, ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಅವರನ್ನು ಕೈ ಬಿಡಲಾಗಿದೆ. ಹೀಗಾಗಿ ರಾಹುಲ್ ಚಹರ್ ಕೈಬಿಟ್ಟಿದ್ದಕ್ಕೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
16 ಸದಸ್ಯರ ಭಾರತ ಟಿ20 ತಂಡದಲ್ಲಿ ತಮ್ಮ ಹೆಸರು ಯಾಕಿಲ್ಲ ಎಂದು ಖಂಡಿತಾ ರಾಹುಲ್ ಚಹರ್‌ಗೆ ಅಚ್ಚರಿಯಾಗಿರುತ್ತದೆ. ಐಸಿಸಿ ಟಿ20 ವಿಶ್ವಕಪ್‌ಗೆ 15 ಸದಸ್ಯರ ತಂಡದಲ್ಲೂ ಸ್ಥಾನ ಪಡೆಯಲು ಬೇಕಾದ ಸಾಮರ್ಥ್ಯ ಚಹರ್‌ಗೆ ಇತ್ತು ಎಂದರು ಸುನೀಲ್ ಗವಾಸ್ಕರ್.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಒಂದು ಪಂದ್ಯದಲ್ಲಿ 7.5ರ ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹೀಗಿದ್ದರೂ ನೀವ್ಯಾಕೆ ಚಹರ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿಲ್ಲ. ಇದಕ್ಕೆ ಕಾರಣವೇನು ಎಂದು ಆಯ್ಕೆ ಸಮಿತಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ ಧವನ್ ಭವಿಷ್ಯ; ಗಬ್ಬರ್ ಸಿಂಗ್ ಟಿ20 ಕರಿಯರ್ಗೆ ಬಿತ್ತಾ ಬ್ರೇಕ್..?