ದಶಕದ ಹಿಂದೆ ಘಟಾನುಘಟಿ ಆಟಗಾರರನ್ನ ಹೊಂದಿದ್ದರೂ, ಒಂದು ಸಾಮಾನ್ಯ ತಂಡವಾಗಿದ್ದ ನ್ಯೂಜಿಲೆಂಡ್​, ಇಂದು ಕ್ರಿಕೆಟ್​ ಲೋಕಕ್ಕೆ ಅಧಿಪತಿ! ಅದಕ್ಕೆ ಕಾರಣ, ತಂಡಕ್ಕೆ​ ಕಾಲಿಟ್ಟ ಆಟಗಾರರು ನೀಡಿದ ಬೊಂಬಾಟ್​​ ಪ್ರದರ್ಶನ. ಕೇನ್​ ವಿಲಿಯಮ್ಸನ್​, ಟಾಮ್​​ ಲಾಥಮ್, ಟ್ರೆಂಟ್​ ಬೋಲ್ಟ್​, ಟೀಮ್​ ಸೌಥಿ​​.. ಹೀಗೆ ತಂಡ ಸೇರಿಕೊಂಡವರೆಲ್ಲಾ, ಈಗ ವರ್ಲ್ಡ್​ ಕ್ಲಾಸ್​ ಪ್ಲೇಯರ್ಸ್​ ಆಗಿದ್ದಾರೆ. ಆದರೀಗ ಇಂತಹ ಘಟಾನುಘಟಿ ಆಟಗಾರರನ್ನೇ ಮೀರಿಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ, ಕಿವೀಸ್​ನ ಈ ಫ್ಯೂಚರ್​​ಸ್ಟಾರ್ಸ್​!

ಶಾರ್ಟ್​ ಟೈಮಲ್ಲೇ ಸೂಪರ್ ಸ್ಟಾರ್​​ಗಳಾದ ಕಾನ್ವೆ-ಜೆಮಿಸನ್
ಡೆವೋನ್​ ಕಾನ್ವೆ, ಕೈಲ್​ ಜೆಮಿಸನ್​.. ಕಿವೀಸ್​ ತಂಡದ ವೆರಿ ವೆರಿ ಟ್ಯಾಲೆಂಟೆಡ್​ ಪ್ಲೇಯರ್ಸ್​​. ಕಿವೀಸ್​ನ ಫ್ಯೂಚರ್​ ಸ್ಟಾರ್ಸ್​​ ಎನಿಸಿಕೊಂಡಿರುವ ಈ ಸೂಪರ್​​​ ಸ್ಟಾರ್ಸ್, ತಂಡದ ಮೇನ್​​ ವೆಪನ್ಸ್​​ ಕೂಡ ಹೌದು! ಟೀಮ್​ಗೆ ಎಂಟ್ರಿಕೊಟ್ಟ ಅಲ್ಪ ಅವಧಿಯಲ್ಲೇ ನಕ್ಷತ್ರಗಳಂತೆ ಮಿನುಗುತ್ತಿರುವ ಜೆಮಿಸನ್​ ಮತ್ತು​​ ಕಾನ್ವೆ, ಸದ್ಯ ನ್ಯೂಜಿಲೆಂಡ್​​​​​ ತಂಡದ ಟ್ರಂಪ್​ ಕಾರ್ಡ್​ ಪ್ಲೇಯರ್ಸ್​. ಅದ್ಭುತ ಟೆಕ್ನಿಕ್, ಪೇಷನ್ಸ್​, ಸಾಲಿಡ್ ಡಿಫೆನ್ಸ್​ ಡೆವೋನ್​ ಕಾನ್ವೆಗಿದ್ರೆ, ಲೈನ್​ ಆ್ಯಂಡ್​ ಲೆಂಥ್​ ಬೌಲಿಂಗ್​ನೊಂದಿಗೆ ಕರಾರುವಕ್​ ದಾಳಿ ಸಂಘಟಿಸುವ ತಾಕತ್ತು ಜೆಮಿಸನ್​​ಗಿದೆ.

ಡೆಬ್ಯೂ ಮಾಡಿದ 20ದಿನಗಳಲ್ಲೇ ಪ್ರತಿಸ್ಫರ್ಧಿಗೆ ನಡುಕ ಹುಟ್ಟಿಸಿದ ಕಾನ್ವೆ
29 ವರ್ಷದ ಡೆವೋನ್​ ಕಾನ್ವೆ, ಟೆಸ್ಟ್​ ಕ್ರಿಕೆಟ್​ಗೆ​​ ಪದಾರ್ಪಣೆ ಮಾಡಿರೋದು 20 ದಿನಗಳ ಹಿಂದೆ. ಸ್ಟಾರ್​​​​​ ಆಟಗಾರರನ್ನ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಎಡಗೈ ಬ್ಯಾಟ್ಸ್​ಮನ್​ ಆಸರೆಯಾಗಿದ್ರು. ಸದ್ಯ ಆಡಿದ ಬೆರಳೆಣಿಕೆ ಪಂದ್ಯಗಳಲ್ಲೇ, ಪ್ರತಿಸ್ಫರ್ಧಿಗೆ ಕಂಟಕವಾಗಿದ್ದಾರೆ. ಏಕೆಂದರೆ ಇಂಗ್ಲೆಂಡ್​ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಹಾಗಿತ್ತು ಕಾನ್ವೆ ಪ್ರದರ್ಶನ. ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಬಾರಿಸಿ, ಗಮನ ಕೂಡ ಸೆಳೆದಿದ್ದಾರೆ.

ಇಂಗ್ಲೆಂಡ್​ ಎದುರು ಕಾನ್ವೆ ಪ್ರದರ್ಶನ

 • ಪಂದ್ಯ 02
 • ರನ್​ 306
 • 50/100 01/01
 • ಸರಾಸರಿ 76.50

ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ 2 ಟೆಸ್ಟ್​​ಗಳನ್ನ ಆಡಿದ್ದ ಕಾನ್ವೆ, 306 ರನ್​ ಕಲೆ ಹಾಕಿದ್ದಾರೆ. ಒಂದು ಶತಕ, ಒಂದು ಅರ್ಧಶತಕ ಸಿಡಿಸಿರುವ ಡೆವೋನ್, 76.50ರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ.

ಟೆಸ್ಟ್​ ಚಾಂಪಿಯನ್​​ಶಿಪ್​​​ ಫೈನಲ್​​ನಲ್ಲೂ ಕಾನ್ವೆ ಮಿಂಚಿಂಗ್​​​
ಅದ್ಭುತ ಲಯದಲ್ಲಿರುವ ಡೆವೋನ್‌ ಕಾನ್ವೆ, ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲೂ ಟೀಮ್​ ಇಂಡಿಯಾಕ್ಕೆ ವಿಲನ್​ ಆಗಿದ್ದಾರೆ. ಮೊದಲ ಇನ್ನಿಂಗ್ಸ್​​ನಲ್ಲಿ ಟೀಮ್​ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿದಿದ್ರೆ, ಕಿವೀಸ್​ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಅದರಲ್ಲೂ ಈ ಲೆಫ್ಟ್​ ಹ್ಯಾಂಡ್​ ಬ್ಯಾಟ್ಸ್​ಮನ್​ ಆಟ, ಕಿವೀಸ್​ ಪಾಳೆಯಕ್ಕೆ ಮತ್ತಷ್ಟು ಹುರುಪು ತಂದಿದೆ. ಅರ್ಧಶತಕ ಸಿಡಿಸಿ, ಫೈನಲ್​ ಪಂದ್ಯವನ್ನ ಅವಿಸ್ಮರಣೀಯಗೊಳಿಸಿಕೊಂಡ ಡೆವೋನ್, ಕಿವೀಸ್​ಗೆ ಉತ್ತಮ ಅಡಿಪಾಯ ಹಾಕಿಕೊಟ್ರು.

WTC ಫೈನಲ್ಲಿ ಕಾನ್ವೆ ಪ್ರದರ್ಶನ

 • ರನ್​ 54
 • ಎಸೆತ 154
 • ಬೌಂಡರಿ 06

ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ನಲ್ಲಿ 154 ಎಸೆತಗಳನ್ನ ಎದುರಿಸಿದ ಕಾನ್ವೆ, 54 ರನ್​ ಕಲೆಹಾಕಿದ್ರು. 6 ಬೌಂಡರಿ ಚಚ್ಚಿದ ಎಡಗೈ ಬ್ಯಾಟ್ಸ್​ಮನ್​, 2ನೇ ಇನ್ನಿಂಗ್ಸ್​ಗೆ ನಿರೀಕ್ಷೆ ಹೆಚ್ಚಿಸಿದ್ದಾರೆ.

ಟೀಮ್​ ಇಂಡಿಯಾವನ್ನ ನಿಜವಾಗಿ ಕಾಡಿದ್ದು ಎತ್ತರದ ವೇಗಿ
ಟೆಸ್ಟ್​​ ಚಾಂಪಿಯನ್​ ಶಿಪ್​ ಫೈನಲ್​​​ನಲ್ಲಿ ಟೀಮ್​ ಇಂಡಿಯಾಗೆ ಟ್ರೆಂಟ್​ ಬೋಲ್ಟ್​​, ನೇಲ್​​​​ ವ್ಯಾಗ್ನರ್​​, ಟಿಮ್​ ಸೌಥಿ ಕಂಟಕವಾಗ್ತಾರೆ ಅನ್ನೋದು ಎಕ್ಸ್​​ಪರ್ಟ್​​​ಗಳ ಅಭಿಪ್ರಾಯವಾಗಿತ್ತು. ಆದರೆ ನಿಜವಾಗಿ ಕಾಡಿದ್ದು ಮಾತ್ರ ಕೈಲ್​ ಜೆಮಿಸನ್​. ಈ ಒಂದು ಅಸ್ತ್ರ, ಟೀಮ್​ ಇಂಡಿಯಾ ಟ್ರಂಪ್​ಕಾರ್ಡ್​​​ಗಳನ್ನ ಸುಲಭಕ್ಕೆ ಪೆವಿಲಿಯನ್​ ದಾರಿ ತೋರಿಸಿ, ತನ್ನ ಸಾಮರ್ಥ್ಯ ಏನಂತ ತೋರಿಸಿದೆ. ಟೆಸ್ಟ್​​ಗೆ ಕಾಲಿಟ್ಟಾಗಿನಿಂದ ಹಿಡಿದು ಇಲ್ಲಿಯವರೆಗೂ ಸಾಲಿಡ್​​ ಫರ್ಪಾಮೆನ್ಸ್​ ನೀಡಿದ ಜೆಮಿಸನ್,​ ವಿಶ್ವ ಕ್ರಿಕೆಟ್​​ನಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ.

ಕೊಹ್ಲಿ ಹುಡುಗರನ್ನ ಖೆಡ್ಡಾಕೆ ಕೆಡವಿದ ಅಜಾನುಬಾಹು
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾವನ್ನ ಖೆಡ್ಡಾಕ್ಕೆ ಕೆಡವಿದ ಜೆಮಿಸನ್​, ದಾಖಲೆ ಬರೆದಿದ್ದಾರೆ. ಐದು ವಿಕೆಟ್ ಉರುಳಿಸಿದ ಅಜಾನುಬಾಹು, 8 ಪಂದ್ಯಗಳಲ್ಲೇ ಐದು ಸಲ ಫೈವ್​ ಫರ್ ವಿಕೆಟ್​ ಪಡೆದು ಗಮನ ಸೆಳೆದಿದ್ದಾರೆ. ಜೊತೆಗೆ ನ್ಯೂಜಿಲೆಂಡ್ ಪರವಾಗಿ 80 ವರ್ಷಗಳ ಹಿಂದಿನ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಫೈನಲ್​​ನಲ್ಲಿ ಭಾರತದ ಪ್ರಮುಖ ಆಟಗಾರರಿಗೆ ಪೆವಿಲಿಯನ್​ ಹಾದಿ ತೋರಿಸಿದ ಕೈಲ್, ನ್ಯೂಜಿಲೆಂಡ್‌ನ ವೇಗಿಯೋರ್ವ ಮೊದಲ 8 ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ರು. ಜೊತೆಗೆ 1930-40ರಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಜಾಕ್ ಕೋವಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಜೆಮಿಸನ್​ ಟೆಸ್ಟ್​​ ಬೌಲಿಂಗ್​ ಪ್ರದರ್ಶನ

 • ಪಂದ್ಯ 08
 • ವಿಕೆಟ್​​ 44
 • ಬೆಸ್ಟ್​​ 6/48
 • 5W/10W 05/01

ಕೈಲ್​ ಜೆಮಿಸನ್​ ಆಡಿದ 8 ಟೆಸ್ಟ್​​ಗಳಲ್ಲಿ 44 ವಿಕೆಟ್​ ಕಬಳಿಸಿದ್ದಾರೆ. 48ರನ್​ ನೀಡಿ 6 ವಿಕೆಟ್​ ಕಬಳಿಸಿದ್ದು, ಇನ್ನಿಂಗ್ಸ್​​ವೊಂದರ ಬೆಸ್ಟ್​ ಆಗಿದೆ. ಜೊತೆಗೆ ಫೈವ್​ ಫರ್​ ಅನ್ನು 5 ಸಲ, ಟೆನ್​ ಫಿಫರ್​ ಅನ್ನು 1 ಸಲ ಕಬಳಿಸಿದ ಸಾಧನೆ ಮಾಡಿದ್ದಾರೆ. ಟೆಸ್ಟ್​​ಗೆ​ ಡೆಬ್ಯೂ ಮಾಡಿದ ಅತ್ಯಲ್ಪ ಅವಧಿಯಲ್ಲೇ ಆಗಾಧವಾಗಿ ಬೆಳೆದ ಕಾನ್ವೆ ಆ್ಯಂಡ್​ ಜೆಮಿಸನ್​, ಕಿವೀಸ್​​ನ ಮೇನ್​ ವೆಪನ್ಸ್​​ಗಳಾಗಿ ಪರಿವರ್ತನೆಗೊಂಡಿದ್ದಾರೆ. ಒಟ್ನಲ್ಲಿ ಈ ಇಬ್ಬರ ಅದ್ಭುತ ಪ್ರದರ್ಶನ ಮುಂದಿನ ಸರಣಿಗಳಲ್ಲಿ ಪ್ರತಿಸ್ಫರ್ಧಿಗಳಿಗೆ ಬಿಗ್​ ವಾರ್ನಿಂಗ್​ ಎಂದರೂ ತಪ್ಪಾಗಲ್ಲ.

The post ಕಿವೀಸ್​ ಪಾಳೆಯದಲ್ಲಿ ಹೊಸ 2 ಬ್ರಹ್ಮಾಸ್ತ್ರ.. ಅತ್ಯಲ್ಪ ಅವಧಿಯಲ್ಲೇ ನಡುಕ ಹುಟ್ಟಿಸಿದ ಭಲೆ ಕಿಲಾಡಿಗಳು appeared first on News First Kannada.

Source: newsfirstlive.com

Source link