ಕಿವೀಸ್​ ಮುಖ್ಯ ಆಟಗಾರರು ಟಿ-20 ಪಂದ್ಯದಲ್ಲಿ ಯಾಕೆ ಆಡ್ತಿಲ್ಲ ಗೊತ್ತಾ? ಇಲ್ಲಿದೆ ‘ವಿಶ್ರಾಂತಿ​ ರಹಸ್ಯ’


ನ್ಯೂಜಿಲೆಂಡ್​​ ತಂಡದ ಆಟಗಾರರು ಟೀಮ್​ ಇಂಡಿಯಾ ವಿರುದ್ಧ ಟೆಸ್ಟ್​​ ಸರಣಿ ಗೆಲ್ಲೋದಕ್ಕೆ ಪಕ್ಕಾ ಪ್ಲಾನ್​ ಮಾಡಿಕೊಂಡಿದ್ದಾರೆ. ತಂಡದ ಪ್ರಮುಖ ಆಟಗಾರರು, ಟಿ20 ಸರಣಿಯನ್ನೇ ತ್ಯಾಗ ಮಾಡಿ, ಭಾರತದಲ್ಲಿ ಪ್ರತಿಷ್ಠಿತ ಟೆಸ್ಟ್ ಸರಣಿ ಗೆಲ್ಲಲು ತಂತ್ರ ರೂಪಿಸಿದ್ದಾರೆ. ಹಾಗಾದ್ರೆ ಟೆಸ್ಟ್ ಸರಣಿಗೆ ತಯರಾಗ್ತಿರೋ ಆಟಗಾರರು ಯಾರು..?

ಇಂಡೋ-ಕಿವೀಸ್​ ಟಿ20 ಸರಣಿ ಈಗಾಗಲೇ ಶುರುವಾಗಿದೆ. ಬಳಿಕ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆರಂಭವಾಗಲಿದೆ. ಆದರೆ ನ್ಯೂಜಿಲೆಂಡ್​​, ಚುಟುಕು ಸರಣಿಗಿಂತ ಟೆಸ್ಟ್ ಸರಣಿ​ ಮೇಲೆ ಹೆಚ್ಚು ಫೋಕಸ್​ ಮಾಡಿದೆ. ಶಾರ್ಟರ್​ ಫಾರ್ಮೆಟ್​​ನಲ್ಲಿ​​ ಸೂಪರ್ ಫಾರ್ಮ್​​ನಲ್ಲಿದ್ದ ಕಿವೀಸ್,​ ಟಿ20 ವಿಶ್ವಕಪ್​​ನಲ್ಲಿ​​​​​​ ಫೈನಲ್​ಗೇರಿ ರನ್ನರ್​ಅಪ್​​​ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಟೂರ್ನಿಯಲ್ಲಿ ಅಬ್ಬರಿಸಿದ ಆಟಗಾರರೇ, ಭಾರತದೆದುರಿನ T20 ಸರಣಿಯಿಂದ ಹಿಂದೆ ಸರಿದಿರೋದು, ಕೊಹ್ಲಿ ಪಡೆಗೆ ಎಚ್ಚರಿಕೆ ಸಂದೇಶ ರವಾನಿಸುವಂತೆ ಮಾಡಿದೆ.

ಸದ್ಯ ಟಿ20 ಸರಣಿಯಿಂದ ಹೊರಗುಳಿದಿರೋದು​ ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್​, ಆಲ್​ರೌಂಡರ್ ಕೈಲ್​ ಜೆಮಿಸನ್. ಜೊತೆಗೆ ವೇಗಿ ಟ್ರೆಂಟ್​ ಬೋಲ್ಟ್​ ಕೂಡ ಟಿ-20 ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ವಿಲಿಯಮ್ಸನ್​, ಬೋಲ್ಟ್​​ ವಿಶ್ವಕಪ್​​ನಲ್ಲಿ ಅದ್ಭುತ ಫಾರ್ಮ್​​ನಲ್ಲಿದ್ರು. ಆದರೆ ವಿಶ್ವಕಪ್​​​ನಲ್ಲಿ ಕಣಕ್ಕಿಳಿಯದ ಜೆಮಿಸನ್​, ಭಾರತದ ವಿರುದ್ಧ ಆಡೋದಕ್ಕೆ ಸಿದ್ಧತೆ ಕೂಡ ಮಾಡಿಕೊಂಡಿದ್ರು. ಆದ್ರೆ ಕೊನೆ ಗಳಿಗೆಯಲ್ಲಿ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಕಿವೀಸ್, ರಹಸ್ಯವಾಗಿ ಟೆಸ್ಟ್ ಸರಣಿಗೆ​​ ರಣತಂತ್ರವನ್ನ ರೂಪಿಸಿಸುತ್ತಿದೆ.

ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ತವಕ..!
ಟೆಸ್ಟ್​ ಸರಣಿ ಕಿವೀಸ್​​​​ಗೆ ಅತ್ಯಂತ ಪ್ರತಿಷ್ಠಿತ ಸರಣಿ. ಹಾಗಂತ ಟಿ20 ಸರಣಿ ಪ್ರಮುಖ ಅಲ್ಲವೆಂದಲ್ಲ, ಏಕೆಂದ್ರೆ ಭಾರತದಲ್ಲಿ ಪ್ರವಾಸಿಗರು ಟೆಸ್ಟ್​ ಗೆಲ್ಲೋದು, ಅಷ್ಟು ಸುಲಭವಲ್ಲ.! ಪಿಚ್​ ಕಂಡೀಷನ್​ ಭಾರತಕ್ಕೆ ಅನುಕೂಲವಾಗಲಿದ್ರೆ, ಪ್ರವಾಸಿಗರಿಗೆ ಪ್ರತಿಕೂಲ ಆಗಿರಲಿದೆ. ಹಾಗಾಗಿ ಟೆಸ್ಟ್​ ಸರಣಿಯನ್ನ ಭಾರತದಲ್ಲಿ ಗೆದ್ದು, ಇತಿಹಾಸ ನಿರ್ಮಿಸೋದ ಕಿವೀಸ್​ ಪ್ಲಾನ್.

ಇಂಜುರಿಯಿಂದ ತಪ್ಪಿಸಿಕೊಳ್ಳಲು ಇದೊಂದು ಕಿವೀಸ್​ ಮಾರ್ಗ..!
T20 ಸರಣಿಗೆ ಸೂಕ್ತವಾದ ಆಟಗಾರರು, ತಂಡದಲ್ಲಿದ್ದಾರೆ. ವಿಶ್ವಕಪ್​​​ನಲ್ಲಿ ಬೆಂಚ್​​ ಕಾದಿದ್ದ ಆಟಗಾರರನ್ನ ಕಣಕ್ಕಿಳಿಸಿ, ತಂಡದಲ್ಲಿ ರಿಫ್ರೆಶ್ ಆಗಿಸಲು​ ಮುಂದಾಗಿದೆ. ಆದರೆ ಟೆಸ್ಟ್​​​ಗೆ ತಕ್ಕಂತ ಆಟಗಾರರು ಕಿವೀಸ್​​​​ನಲ್ಲಿಲ್ಲ. ಹಾಗಾಗಿ ವಿಲಿಯಮ್ಸನ್​, ಜೆಮಿಸನ್​ ಟಿ20 ಸರಣಿಯಲ್ಲೂ ಆಡಿದ್ರೆ, ಮಾನಸಿಕ ಮತ್ತು ದೈಹಿಕ ಪರಿಣಾಮ ಎದುರಿಸಬೇಕಾಗುತ್ತೆ. ಹಾಗೆಯೇ ಇಂಜುರಿಗೆ ಒಳಗಾಗಿ ಬಿಟ್ಟರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತೆ. ಇದರಿಂದ ಮೊದಲೇ ಯೋಜನೆ ರೂಪಿಸಿಕೊಂಡ ಕಿವೀಸ್​, ಟೆಸ್ಟ್​ಗಾಗಿ ಆಟಗಾರರಿಗೆ ವಿಶ್ರಾಂತಿ ನೀಡಿದೆ.

ತಂಡದಲ್ಲಿನ ಆಟಗಾರರ ಮೇಲಿನ ಕೆಲಸದ ಹೊರೆ ತಗ್ಗಿಸುವ ಕುರಿತು, ಭಾರತ ಈಗ ಚರ್ಚೆ ನಡೆಸ್ತಿದೆ. ಆದರೆ ಕಿವೀಸ್​, ಭಾರತಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಚುಟುಕು ಸರಣಿಗೂ ಮುನ್ನವೇ ಆಟಗಾರರ ಒತ್ತಡವನ್ನ ಇಳಿಸುವ ಬಗ್ಗೆ​ ಪ್ಲಾನ್​ ಮಾಡಿತ್ತು. ಅದನ್ನೇ ಈಗ ಅಳವಡಿಸಿಕೊಂಡಿದೆ. ಆ ಮೂಲಕ ಆಟಗಾರರಿಗೆ ವಿಶ್ರಾಂತಿ ಎಂಬಂತೆ ಬಿಂಬಿಸಿ, ಟೀಮ್​ ಇಂಡಿಯಾಗೆ ಗುನ್ನಾ ಇಡೋದಕ್ಕೆ ಪಕ್ಕಾ ಯೋಜನೆ ರೂಪಿಸಿದೆ. ಹೀಗಾಗಿ ಭಾರತ, ಎಚ್ಚರಿಕೆ ವಹಿಸೋದು ಉತ್ತಮ.

News First Live Kannada


Leave a Reply

Your email address will not be published. Required fields are marked *