ಕಿವೀಸ್​ ಸರಣಿ ಗೆದ್ದ ಟೀಂ ಇಂಡಿಯಾಗೆ ಬಿಗ್ ​ಟಾಸ್ಕ್​ -ಯುವ ಭಾರತ ನಿರ್ಮಾಣಕ್ಕೆ ಇದೊಂದು ಸುವರ್ಣಾವಕಾಶ


ಟಿ20 ವಿಶ್ವಕಪ್​​​ ಬಳಿಕ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ವಿರುದ್ಧದ​​ ಸರಣಿಯಲ್ಲಿ ಭರ್ಜರಿ ಬೌನ್ಸ್​ ಬ್ಯಾಕ್​ ಮಾಡಿದೆ. ಕಿವೀಸ್​ ಸರಣಿಯಲ್ಲಿ ಟೀಮ್ ಇಂಡಿಯಾ, ಕೆಲ ಮಹತ್ವದ ಪಾಠಗಳನ್ನೂ ಕಲಿತಿದೆ. ಇದು ಮುಂಬರುವ ದಿನಗಳಲ್ಲಿ, ಟೀಮ್ ಇಂಡಿಯಾ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಅನ್ನೋದನ್ನ ಈ ಮುಂದೆ ನೋಡೋಣ.

ನ್ಯೂಜಿಲೆಂಡ್ ವಿರುದ್ಧ ಟೀಮ್​ ಇಂಡಿಯಾ, ಟಿ-ಟ್ವೆಂಟಿ ಸರಣಿ ಗೆದ್ದಿದೆ. ಸೀನಿಯರ್​​​​​ ಆಟಗಾರರ ಅಲಭ್ಯತೆಯಲ್ಲೂ ಯುವ ಭಾರತ, ಅದ್ಭುತ ಪ್ರದರ್ಶನ ತೋರಿದೆ. ಹೀಗಾಗಿ ಯುವ ಆಟಗಾರರ ಮೇಲೆ ಭರವಸೆ ಹೆಚ್ಚಾಗಿದೆ. ಜೊತೆಗೆ ಟೀಮ್​ ಇಂಡಿಯಾ ಸಾಕಷ್ಟು ಪಾಠ ಕಲಿತಿದೆ. ಹಾಗೇ ಮುಂದಿನ ಸರಣಿಗಳಿಗೆ ಸಿದ್ಧತೆ ಕೂಡ ಮಾಡಿಕೊಳ್ಳಬೇಕಿದೆ.

ರೋಹಿತ್​​-ರಾಹುಲ್​​ ಆರಂಭಿಕರಾಗಿಯೇ ಕಣಕ್ಕಿಳಿಯಬೇಕು..
ಯೆಸ್​​..! ರೋಹಿತ್​ ​- ರಾಹುಲ್ ಬಿರುಸಿನ ಓಪನಿಂಗ್ ನೀಡ್ತಾರೆ. ಪವರ್​​ ಪ್ಲೇನಲ್ಲಿ ಬಿಗ್​ ಸ್ಕೋರ್​ ಕಲೆ ಹಾಕ್ತಾರೆ. ಇಬ್ಬರ ಅಂಡರ್​​ಸ್ಟಾಂಡಿಂಗ್​​ ಕೂಡ ಸಖತ್ತಾಗಿದೆ. ಇದು ತಂಡಕ್ಕೆ ಗುಡ್​​ ಫೌಂಡೇಶನ್​ ಹಾಕೋದಕ್ಕೆ ನೆರವಾಗ್ತಿದೆ. ಹಾಗಾಗಿ ಈ ಇಬ್ರನ್ನೇ ಆರಂಭಿಕರಾಗಿ ಕಣಕ್ಕಿಳಿಸಬೇಕು. ಲೆಫ್ಟ್​​​​​​​​​​, ರೈಟ್​​​​​ ​​​​​ಕಾಂಬಿನೇಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು.

ಫಿಂಗರ್​​ ಸ್ಪಿನ್ನರ್​​ಗಳಿಗೆ ತಂಡದಲ್ಲಿ ಅವಕಾಶ ನೀಡಬೇಕು..
ಫಿಂಗರ್​ ಸ್ಪಿನ್ನರ್​​​ಗಳ ಮೇಲೆ ಕ್ಯಾಪ್ಟನ್​​ಗಳು, ಭರವಸೆ ಇಡಬೇಕು. ಯಾಕಂದ್ರೆ ಫಿಂಗರ್ ಸ್ಪಿನ್ನರ್ಸ್​​ಮ್ಯಾಚ್​ವಿನ್ನರ್ಸ್​ ಆಗಬಲ್ಲರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಮತ್ತು ಅಕ್ಷರ್ ಪಟೇಲ್​​ ಸ್ಪೆಲ್, ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಹಾಗಾಗಿ ರಿಸ್ಟ್​​ ಸ್ಪಿನ್ನರ್​ಗಳಂತೆ, ಫಿಂಗರ್​ ಸ್ಪಿನ್ನರ್​​ಗಳಿಗೂ ತಂಡದಲ್ಲಿ ಅವಕಾಶ ನೀಡಬೇಕು.

ಮಿಡಲ್​ ಆರ್ಡರ್​​ ಚೇತರಿಕೆಗೆ ಬೇಕಿದೆ ಕಾಲಾವಕಾಶ..
ಕಿವೀಸ್​ ಸರಣಿಯಲ್ಲಿ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕ, ದಿಢೀರ್ ಕುಸಿತ ಕಾಣ್ತು. ಅನಾನುಭವಿ ಬ್ಯಾಟರ್​ಗಳೇ ಇದ್ದದ್ದೇ ಅದಕ್ಕೆ ಕಾರಣ. ಸೂರ್ಯಕುಮಾರ್, ಶ್ರೇಯಸ್​, ವೆಂಕಟೇಶ್​ ಅಯ್ಯರ್​, ​ಪಂತ್​​ಗೆ ಒತ್ತಡವನ್ನ ನಿಭಾಯಿಸುವ ಶಕ್ತಿ ಸಾಲದು. ಹೀಗಾಗಿ ಮಧ್ಯಮ ಕ್ರಮಾಂಕ ಕುದುರಿಕೊಳ್ಳಲು ಇನ್ನೂ ಕಾಲಾವಕಾಶ ಬೇಕಿದೆ.

ಯುವ ಆಟಗಾರರ ಮೇಲೆ ನಂಬಿಕೆ ಇಡಬೇಕು..
ಯಂಗ್​​ಸ್ಟರ್​​ಗಳಿಗೆ ತಂಡದಲ್ಲಿ ಹೆಚ್ಚೆಚ್ಚು ಅವಕಾಶ ನೀಡಬೇಕು. ಅವರ ಮೇಲೆ ನಂಬಿಕೆ ಕೂಡ ಇಡಬೇಕು. ಆಗ ಯುವ ಆಟಗಾರರ ಕಾನ್ಫಿಡೆನ್ಸ್ ಲೆವೆಲ್ ಹೆಚ್ಚುವುದರಲ್ಲದೇ, ಉತ್ತಮ ಪರ್ಫಾಮೆನ್ಸ್ ನೀಡಲು ಸಾಧ್ಯವಾಗುತ್ತದೆ.

ಸ್ಟಾರ್​​ ಆಟಗಾರರ ಮೇಲೆಯೇ ಅವಲಂಬಿತವಾಗಬಾರದು..
ಸ್ಟಾರ್​ ಪ್ಲೇಯರ್​​ಗಳ ಮೇಲೆ ಡಿಪೆಂಡ್ ​ಆಗಬಾರದು ಅನ್ನೋದಕ್ಕೆ ಉತ್ತಮ ಉದಾಹರಣೆ ಈ ಸರಣಿ. ಕೊಹ್ಲಿ, ಜಡೇಜಾ ಶಮಿ, ಬೂಮ್ರಾ, ಹಾರ್ದಿಕ್​ ಸೇರಿ ಹಲವರು ಅಲಭ್ಯರಾಗಿದ್ರು. ಇದರ ನಡುವೆಯೂ ಭಾರತ 3-0 ಅಂತರದಲ್ಲಿ ಸರಣಿ ಗೆದ್ದಿದೆ. ಹಾಗಾಗಿ ಗೆಲುವಿಗೆ ಸ್ಟಾರ್​​​ಗಳನ್ನೇ ಅವಲಂಬಿಸಬಾರದು. ಇದು ತಂಡದ ಹಿನ್ನಡೆಗೆ ಕಾರಣವಾಗುತ್ತೆ.

News First Live Kannada


Leave a Reply

Your email address will not be published. Required fields are marked *