ಕಿಸ್ಸಿಂಗ್​ ಸೀನ್​ ಮಾಡೋಕೆ ಪತಿ ರಣವೀರ್​ ಪರ್ಮಿಶನ್​ ಕೇಳಿರಲಿಲ್ಲವಾ ದೀಪಿಕಾ?


ಮದ್ವೆಗೆ ಮುಂಚೆ ಹಾಟ್ ದೃಶ್ಯಕ್ಕೂ ಸೈ, ಕಿಸ್ಸಿಂಗ್ ಸೀನ್​ಗೂ ಜೈ ಎನ್ನುತ್ತಿದ್ದ ದೀಪಿಕಾ ಪಡುಕೋಣೆ ಈಗ ಗಂಡನ ಪರ್ಮಿಷನ್ ತಗೊಂಡು ಆಕ್ಟ್ ಮಾಡ್ಬೇಕಂತೆ. ಸಹನಟನ ಜೊತೆ ಕಿಸ್ಸಿಂಗ್ ಸೀನ್ ಮಾಡಬೇಕು ಅಂದ್ರೆ ಪತಿಯ ಅನುಮತಿ ಬೇಕೇ ಬೇಕಂತೆ. ಹೌದಾ, ಇದು ನಿಜವೇ ಎಂದು ಕೇಳಿದ್ದಕ್ಕೆ ಗರಂ ಆಗಿಬಿಡೋದಾ ಬೆಂಗಳೂರು ಬ್ಯೂಟಿ?

ದೀಪಿಕಾ ಪಡುಕೋಣೆ ಅಭಿಮಾನಿಗಳು ಫೆಬ್ರವರಿ 11ಕ್ಕಾಗಿ ಎದುರು ನೋಡುತ್ತಿದ್ದಾರೆ. ಏಕಂದ್ರೆ ಆ ದಿನ ದೀಪಿಕಾ ಅಭಿನಯಿಸಿರುವ ಗೆಹ್ರೈಯಾನ್ ಅಮೇಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗುತ್ತಿದೆ. ಸಿದ್ಧಾರ್ಥ್ ಚರ್ತುವೇದಿ, ಅನನ್ಯ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಇಂಟಿಮೇಟ್ ಸೀನ್ಸ್ ಸ್ವಲ್ಪ ಹೆಚ್ಚಾಗಿಯೇ ಇದೆ. ಅದರಲ್ಲೂ ಕಿಸ್ಸಿಂಗ್ ದೃಶ್ಯಗಳಲ್ಲಿ ದೀಪಿಕಾ ಕಣ್ಣು ಕುಕ್ಕುತ್ತಿದ್ದಾರೆ.

ಸಹ ನಟ ಸಿದ್ಧಾರ್ಥ್​ಗೆ ರಣ್ವೀರ್ ಪತ್ನಿ ಚುಂಬಿಸಿರುವ ಸೀನ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಹಲವು ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. ಈಗ ವಿಷ್ಯ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯ ಮಾಡಲು ತನ್ನ ಪತಿ ರಣ್ವೀರ್ ಸಿಂಗ್ ಬಳಿ ದೀಪಿಕಾ ಪರ್ಮಿಷನ್ ತಗೊಂಡಿದ್ದಾರಂತೆ. ಈ ಸುದ್ದಿ ಬಿಟೌನ್​ ಗಲ್ಲಿಗಲ್ಲಿ ಗಿರಿಕಿ ಹೊಡಿದಿದೆ.

ಗಂಡನ ಬಳಿ ಪರ್ಮಿಷನ್ ಹಾ? ಹಾಗಾದ್ರೆ ದೀಪಿಕಾ ತನಗೆ ಇಷ್ಟ ಬಂದಂತೆ ನಟಿಸಲು ಸ್ವಾತಂತ್ರ್ಯ ಇಲ್ವೇ ಕೆಲವರು ಕೇಳ್ತಿದ್ದಾರೆ. ಸರಿ ಈ ವಿಷ್ಯನಾ ದೀಪಿಕಾ ಬಳಿಯೇ ಕೇಳಿ ಕನ್​ಫರ್ಮ್​ ಮಾಡಿಕೊಳ್ಳೋಣ ಅಂತ ಮಾಧ್ಯಮದವರು, ’ಕಿಸ್ಸಿಂಗ್ ಸೀನ್ ಮಾಡೋಕೆ ನಿಮ್ಮ ಪತಿ ಹತ್ರಾ ಅನುಮತಿ ತಗೊಂಡಿದ್ರಂತೆ ಹೌದಾ’ ಎಂದು ಕೇಳೇಬಿಟ್ಟರು. ಅದಕ್ಕೆ ಸ್ವಲ್ಪ ಅಪ್​ಸೆಟ್​ ಆದ ದೀಪಿಕಾ ’ಇದು ಸ್ಟುಪಿಡ್’ ಅಂದುಬಿಟ್ಟರು.

’ನಾನು ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಇಷ್ಟ ಪಡಲ್ಲ. ಕಾಮೆಂಟ್​ಗಳನ್ನು ಸಹ ನಾನು ಓದುವುದಿಲ್ಲ. ನನ್ನ ಪತಿ ಸಹ ಇದನ್ನು ಬೆಂಬಲಿಸುವುದಿಲ್ಲ. ನನ್ನ ಮುಂದಿನ ಚಿತ್ರದ ಬಗ್ಗೆ ಅವರು ಹೆಮ್ಮೆ ಪಡ್ತಾರೆ, ನನ್ನ ನಟನೆ ಬಗ್ಗೆ ಖುಷಿ ಪಡ್ತಾರೆ, ಇದೆಲ್ಲಾ ಸ್ಟುಪಿಡ್ ಅಷ್ಟೇ’ ಎಂದು ಗೊಂದಲಕ್ಕೆ ಫುಲ್​ಸ್ಟಾಪ್​ ಇಟ್ಟರು. ದೀಪಿಕಾ ಹೀಗೆ ಹೇಳುತ್ತಿದ್ದಂತೆ ಸರಿ ಹೋಗ್ಲಿ ಬಿಡಿ, ಗೆಹ್ರೈಯಾನ್ ಸಿನಿಮಾ ರಿಲೀಸ್ ಆಗ್ತಿದೆ, ಸಿನಿಮಾ ನೋಡಿ ಖುಷಿ ಪಡೋಣ ಅಂತ ನೆಟ್ಟಿಗರು ಸಹ ತೆಪ್ಪಗಾದರು.

News First Live Kannada


Leave a Reply

Your email address will not be published.