ಕುಂದಗೋಳ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಲಾರಿ ಕಳ್ಳನ ಬಂಧನ | Interstate lorry thief arrested by kundagol police hubli


ಕೊಡಗಿನಲ್ಲಿ ಆನೆ ಹಾವಳಿ ಮುಂದುವರೆದಿದೆ. ಭತ್ತದ ಪೈರು ತುಳಿದು ಕಾಡಾನೆಗಳು ದಾಂಧಲೆ ನಡೆಸಿವೆ. ಕಾಡಾನೆಗಳ ಹಿಂಡು ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ಪೂವಿ ಚೋಂದಮ್ಮ ಎಂಬುವರ ತೋಟಕ್ಕೆ ನುಗ್ಗಿ ಬೆಳೆ ನಾಶಗೊಳಿಸಿವೆ.

ಕುಂದಗೋಳ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಲಾರಿ ಕಳ್ಳನ ಬಂಧನ

ಸಾಂದರ್ಭಿಕ ಚಿತ್ರ

Image Credit source: NDTV

ಹುಬ್ಬಳ್ಳಿ: ಧಾರವಾಡದ ಕುಂದಗೋಳ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಲಾರಿ ಕಳ್ಳನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಲಾರಿಯನ್ನ ಕದ್ದು ತಂದಿದ್ದ ಕಳ್ಳ ಕುಂದಗೋಳ ಮೂಲಕ ಲಕ್ಷ್ಮೇಶ್ವರ ಕೊಂಡೊಯ್ಯುತ್ತಿದ್ದ ವೇಳೆ ಪೊಲೀಸರು ಕಳ್ಳನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಲಾರಿಯ ನಂಬರ್ ಪ್ಲೇಟ್ ಬದಲಾಯಿಸಿ ಬಿಡಿ ಬಿಡಿಯಾಗಿ ಸಾಮಾನು ಮಾರಾಟಕ್ಕೆ ಯತ್ನಿಸಿದ್ದ. ಲಾರಿ ಸಮೇತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಕಾಡಾನೆಗಳ ಹಿಂಡು

ಕೊಡಗು: ಕೊಡಗಿನಲ್ಲಿ ಆನೆ ಹಾವಳಿ ಮುಂದುವರೆದಿದೆ. ಭತ್ತದ ಪೈರು ತುಳಿದು ಕಾಡಾನೆಗಳು ದಾಂಧಲೆ ನಡೆಸಿವೆ. ಕಾಡಾನೆಗಳ ಹಿಂಡು ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ಪೂವಿ ಚೋಂದಮ್ಮ ಎಂಬುವರ ತೋಟಕ್ಕೆ ನುಗ್ಗಿ ಬೆಳೆ ನಾಶಗೊಳಿಸಿವೆ. ಆನೆಗಳನ್ನ ಕಾಡಿಗಟ್ಟುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗಾಂಜಾ ಶೇಖರಿಸಿಟ್ಟಿದ್ದ ಆರೋಪಿ ಬಂಧನ

ಕೋಲಾರ: ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮನೆಯಲ್ಲಿ ಅಕ್ರಮವಾಗಿ ಗಾಂಜಾ ಶೇಖರಿಸಿಟ್ಟಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೋಲಾರ ನಗರದ ಕೋಗಿಲಹಳ್ಳಿ ಬಡಾವಣೆಯಲ್ಲಿ ಹರ್ಷದ್ ಪಾಷಾ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 420 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.