ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನ ಮಕ್ಕಿ ಮನೆಯಲ್ಲಿ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮನೆಯೊಳಗಿದ್ದ ದಂಪತಿಗಳಿಗೆ ಗಂಭೀರ ಗಾಯವಾಗಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಮತ್ತು ಬೃಹತ್ ಗಾತ್ರದ ದೊಪದ ಮರ ಬಿದ್ದು ಮನೆ ಹಾನಿಯಾಗಿದೆ.ಬಸ್ರೂರು ಮಕ್ಕಿಮನೆ ಗಣಪಯ್ಯ ಗಾಣಿಗರಿಗೆ ಸೇರಿದ ಮನೆ ಇದಾಗಿದೆ.ಗಣಪಯ್ಯ ಗಾಣಿಗ ಮತ್ತು ಪತ್ನಿ ವಾರಿಜ ಗಂಭೀರ ಗಾಯವಾಗಿದ್ದು ಮನೆಯಲ್ಲಿ ಇದ್ದ ಮಕ್ಕಳಿಗೆ ಯಾವುದೇ ಅಪಾಯವಾಗದೆ ಅದೃಷ್ಟವಶಾತ್ ಪಾರಾಗಿದ್ದಾರೆ. ಮನೆಯ ಗೋಡೆಗಳು ಕುಸಿದು ಬಿರುಕು ಬಿಟ್ಟಿದೆ ಮೇಲ್ಛಾವಣಿ ಕುಸಿದಿದೆ ಸದ್ಯ ಆಸ್ಪತ್ರೆಯಲ್ಲಿ ದಂಪತಿ ಚೇತರಿಸಿಕೊಂಡಿದ್ದಾರೆ.

The post ಕುಂದಾಪುರದಲ್ಲಿ ಭಾರಿ ಮಳೆಗೆ ಮನೆ ಕುಸಿತ: ಮನೆಯಲ್ಲಿದ್ದ ದಂಪತಿಗೆ ಗಂಭೀರ ಗಾಯ appeared first on News First Kannada.

Source: newsfirstlive.com

Source link