ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಐಸಿಸಿಯ ಪುರುಷರ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ಗಂಗೂಲಿ ಭಾರತದವರೇ ಆದ ಅನಿಲ್ ಕುಂಬ್ಳೆ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಕುಂಬ್ಳೆ ಅವರು 2012ರಿಂದ ಈ ಸ್ಥಾನದಲ್ಲಿದ್ದರು. ಗಂಗೂಲಿ ಅವರನ್ನು ಐಸಿಸಿಯ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ವಾಗತಿಸಲು ಸಂತಸ ಎನಿಸುತ್ತಿದೆ’ ಎಂದು ಐಸಿಸಿ ಚೇರ್ಮನ್ ಗ್ರೆಗ್ ಬಾರ್ಕ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ, ನಂತರ ಆಡಳಿತಗಾರರಾಗಿ ಅವರು ಹೊಂದಿರುವ ಅನುಭವ ಕ್ರಿಕೆಟ್‌ಗೆ ಸಂಬಂಧಿಸಿದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಒಂಬತ್ತು ವರ್ಷಗಳಿಂದ ಅತ್ಯುತ್ತಮ ರೀತಿ ಮುನ್ನಡೆಸಿದ ಅನಿಲ್ ಕುಂಬ್ಳೆ ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದೂ ತಿಳಿಸಿದ್ದಾರೆ.