ಕುಖ್ಯಾತ ರೌಡಿ ನಾಗನ ಸಹಚರರು ಅಂದರ್ ಆಗಿದ್ದಾರೆ. ದರೋಡೆಗೆ ಸಂಚು ರೂಪಿಸುತ್ತಿದ್ದ, ಗ್ಯಾಂ​ಗ್ ಸದಸ್ಯರನ್ನ ರೆಡ್​ ಹ್ಯಾಂಡ್​ ಆಗಿ ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಜಾನ್ ವಿಲಿಯಂ ಅಲಿಯಾಸ್​ ಅಪ್ಪು, ಶಶಿಧರ ಅಲಿಯಾಸ್​ ಗುಂಡ, ಪಾರ್ತಿಬಲ್ ಬಿನ್ ಗೋಂವಿದರಾಜು ಹಾಗೂ ಮೈಕಲ್  ಜಾಕ್ಸನ್ ಬಂಧಿತರು. ಶಾಂತಿನಗರದ ಬರ್ಲಿ ಸ್ಟ್ರೀಟ್ನ ಕ್ರಿಶ್ಚಿಯನ್ ಮಸಣದ ಬಳಿ, ಒಂಟಿಯಾಗಿ ಬರುವ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ನಗದು ಚಿನ್ನ ಆಭರಣಗಳನ್ನ ದೋಚಲು ಸಜ್ಜಾಗಿದ್ದ ಗ್ಯಾಂಗ​ನ್ನ ಪೊಲೀಸ್ರು ಅರೆಸ್ಟ್​ ಮಾಡಿದ್ದಾರೆ.

ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ  ಸಿಸಿಬಿ ಪೊಲೀಸರು ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದಾರೆ.

 

The post ಕುಖ್ಯಾತ ರೌಡಿ ನಾಗನ ಸಹಚರರು ಸಿಸಿಬಿ ವಶಕ್ಕೆ appeared first on News First Kannada.

Source: newsfirstlive.com

Source link