ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪಾಸಿಟಿವಿಟಿ ರೇಟ್​ 10ಕ್ಕಿಂತ ಕಡಿಮೆ ಇದೆ ಅಂತಾ ಆರೋಗ್ಯ ಸಚಿವ ಡಾ.ಸುಧಾಕರ್​ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಸುಧಾಕರ್​​.. ಇಂದು ಒಟ್ಟು 1,42,291 ಕೊರೊನಾ ಟೆಸ್ಟ್​ ಮಾಡಲಾಯಿತು. ಅದರಲ್ಲಿ 13,800 ಮಂದಿಗೆ ಸೋಂಕು ದೃಢವಾಗಿದೆ. ಏಪ್ರಿಲ್ 15 ರ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಪಾಸಿಟಿವಿಟಿ ರೇಟ್​ 10ಕ್ಕಿಂತ ಕಡಿಮೆ ಬಂದಿದೆ ಎಂದು ತಿಳಿಸಿದ್ದಾರೆ.

ಇನ್ನು ಇಂದು 25,346 ಸೋಂಕಿತರು ಗುಣಮುಖರಾಗಿದ್ದಾರೆ. ಇವರಲ್ಲಿ 8,852 ಮಂದಿ ಬೆಂಗಳೂರಿನ ಸೋಂಕಿತರು ಎಂದು ತಿಳಿಸಿದ್ದಾರೆ.

The post ಕುಗ್ಗಿದ ಕೊರೊನಾ.. ರಾಜ್ಯದಲ್ಲಿ ಇಂದು ಶೇ.10ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ appeared first on News First Kannada.

Source: newsfirstlive.com

Source link