ನವದೆಹಲಿ: ಭಾರತೀಯ ಮಹಿಳಾ ಫೂಟ್​ಬಾಲ್ ಟೀಮ್​ಗೆ ಕಳೆದ ವರ್ಷ ಆಯ್ಕೆಯಾದ ಫೂಟ್​ಬಾಲರ್ ಸಂಗೀತ ಸೊರೇನ್ ಸದ್ಯ ಕೋವಿಡ್​ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಇವರ ನೆರವಿಗೆ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಮುಂದಾಗಿದ್ದಾರೆ.

ಬಡ ಕುಟುಂಬದ ಸಂಗೀತಾ ಸೊರೇನ್ ಕೋವಿಡ್ ಕಷ್ಟಕಾಲದಲ್ಲಿ ಕುಟುಂಬದ ಹಸಿವು ನೀಗಿಸಲು ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಇವರು ಭಾರತೀಯ ಸೀನಿಯರ್ ಫೂಟ್ ಬಾಲ್​ ಟೀಮ್​ಗೆ ಆಯ್ಕೆಯಾಗುವ ಮುನ್ನ 18-19 ವರ್ಷದೊಳಗಿನ ಟೂರ್ನಮೆಂಟ್​ನಲ್ಲಿ ಭೂತಾನ್ ಮತ್ತು ಥೈಲ್ಯಾಂಡ್​ನ್ನು ಪ್ರತಿನಿಧಿಸಿದ್ದರು.

ಸದ್ಯ ಸಂಗೀತಾ ಅವರ ನೆರವಿಗೆ ಕಿರೆಣ್ ರಿಜಿಜು ಮುಂದಾಗಿದ್ದು ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಫೂಟ್​ಬಾಲರ್ ಸಂಗೀತಾ ಸೊರೇನ್ ಅವರ ಕುರಿತು ಮಾಹಿತಿ ಲಭ್ಯವಾಗಿದೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಸದ್ಯ ಕೊವಿಡ್​ ಸಮಯದಲ್ಲಿ ಹಣಕಾಸು ತೊಂದರೆಗೆ ಸಿಲುಕಿದ್ದಾರೆ. ನಮ್ಮ ಕಚೇರಿಯಿಂದ ಅವರನ್ನ ಸಂಪರ್ಕಿಸಲಾಗಿದ್ದು  ಸದ್ಯದಲ್ಲೇ ಅವರಿಗೆ ನೆರವು ನೀಡಲಾಗುವುದು. ಕ್ರೀಡಾಪಟುಗಳ ಘನತೆಯ ಬದುಕು ನಮಗೆ ಅತಿಮುಖ್ಯವಾದುದು ಎಂದಿದ್ದಾರೆ.

The post ಕುಟುಂಬದ ಹಸಿವು ನೀಗಿಸಲು ದಿನಗೂಲಿ: ಫೂಟ್​ಬಾಲ್ ಆಟಗಾರ್ತಿಯ ನೆರವಿಗೆ ಬಂದ ಕೇಂದ್ರ ಸಚಿವ appeared first on News First Kannada.

Source: newsfirstlive.com

Source link