ಕುಡಿತದ ಅಮಲಿನಲ್ಲಿಸಿಟಿ ರವಿಯಂತೆ ನಾವು ಯಾರನ್ನೂ ಸಾಯಿಸಿಲ್ಲ: ಬಿಕೆ ಹರಿಪ್ರಸಾದ್ | We have not killed anybody under the influence of alcohol as CT Ravi did: BK Hari Prasadಕಾಂಗ್ರೆಸ್ ನಾಯಕರು ರವಿಯ ಹಾಗೆ ಕುಡಿದ ಅಮಲಿನಲ್ಲಿ ಅಮಾಯಕರನ್ನು ರಸ್ತೆ ಮೇಲೆ ಸಾಯಿಸಲಿಲ್ಲ, ಸತ್ತವರ ಕುಟುಂಬಗಳಿಗೆ ಪರಿಹಾರ ನೀಡದೆ ಅವರಿಗೂ ರವಿ ಮೋಸ ಮಾಡಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.

TV9kannada Web Team


| Edited By: Arun Belly

Sep 30, 2022 | 10:48 AM
ಚಾಮರಾಜನಗರ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ಮತ್ತು ಕಾಂಗ್ರೆಸ್ ನಾಯಕರ ನಡುವೆ ಕೋಳಿ ಜಗಳ ಮುಂದುವರಿದಿದೆ. ಚಾಮರಾಜನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ (BK Hari Prasad) ಅವರು, ರವಿ ಕಾಂಗ್ರೆಸ್ ನಾಯಕರ ಹಗರಣಗಳ ಬಗ್ಗೆ ಮಾತಾಡುತ್ತಾರೆ, ಅಸಲಿಗೆ ಅವರೊಬ್ಬ ಹಫ್ತಾ ವಸೂಲಿ ಗಿರಾಕಿ. ಶಾಸಕನಾಗುವ ಮೊದಲು ಅವರು ಬೇರೆಯವರ ಬಳಿ ಲಿಫ್ಟ್ ಕೇಳಿ ಕಾಲೇಜಿಗೆ ಬರುತ್ತಿದ್ದರು, ನಾನು ಆ ದಿನಗಳಲ್ಲೇ ಸ್ಕೂಟರಲ್ಲಿ ಕಾಲೇಜಿಗೆ ಹೋಗುತ್ತಿದ್ದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರು ರವಿಯ ಹಾಗೆ ಕುಡಿದ ಅಮಲಿನಲ್ಲಿ ಅಮಾಯಕರನ್ನು ರಸ್ತೆ ಮೇಲೆ ಸಾಯಿಸಲಿಲ್ಲ, ಸತ್ತವರ ಕುಟುಂಬಗಳಿಗೆ ಪರಿಹಾರ ನೀಡದೆ ಅವರಿಗೂ ರವಿ ಮೋಸ ಮಾಡಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.

TV9 Kannada


Leave a Reply

Your email address will not be published.