ಕುಡಿತದ ಚಟಕ್ಕೆ ಬಿದ್ದು ತನ್ನ ಮಗುವನ್ನೇ ಮಾರಾಟ ಮಾಡಿದ ಪಾಪಿ ತಂದೆ..!


ಕೊಪ್ಪಳ: ಸರ್ಕಾರಿ ಆಸ್ಪತ್ರೆಯ ನರ್ಸ್​​ ಮೂಲಕ ನಾಲ್ಕು ವರ್ಷದ ಹೆಣ್ಣು ಮಗುವನ್ನು ತಂದೆ ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಜುನಾಥ್​ ಮತ್ತು ಭದ್ರಮ್ಮ ದಂಪತಿಗಳ ನಾಲ್ಕು ವರ್ಷಗಳ ಹೆಣ್ಣ್ಣು ಮಗುವನ್ನು ಪತಿ ಮಂಜುನಾಥ್​ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ನಿರ್ಗತಿಕರಾದ ದಂಪತಿಗಳು ದಿನವಿಡಿ ಅಲೆದಾಡಿ ರಾತ್ರಿ ವೇಳೆ ಆಸ್ಪತ್ರೆಯ ಆವರಣದಲ್ಲಿ ವಾಸ್ತವ್ಯ ಹೂಡುತ್ತಿದ್ದರಂತೆ. ಪತಿ ಮದ್ಯದ ಚಟಕ್ಕೆ ಬಿದ್ದಿದ್ದು ಆಸ್ಪತ್ರೆಯ ನರ್ಸ್​ ಮೂಲಕ ಹಣದ ಆಸೆಗಾಗಿ ಮಗುವನ್ನು ಮಾರಾಟ ಮಾಡಿದ್ದಾನೆಂದು ಪತಿ ಭದ್ರಮ್ಮ ಆರೋಪಿಸಿದ್ದಾರೆ.

ಇದನ್ನೂ ಓದಿ:ಒಂದೂವರೆ ಟನ್​ ಕೋಳಿಗಳು ತುಂಬಿದ್ದ ಕ್ಯಾಂಟರ್​ ಪಲ್ಟಿ; ಎಲ್ಲವೂ ಸಾವು

ಈ ವಿಚಾರವಾಗಿ ನಡು ರಸ್ತೆಯಲ್ಲಿ ಪತಿಯೊಂದಿಗೆ ಜಗಳವಾಡುವಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿದ ಸಾರ್ವಜನಿಕರು ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಕ್ಕಳ ಸಹಾಯವಾಣಿ ತಂಡ ನರ್ಸ್​ ಹೊಸಪೇಟೆ ಮೂಲದ ಪೊಲೀಸ್​ರೊಬ್ಬರಿಗೆ ಮಾರಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಇನ್ನು ದಂಪತಿಗಳನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

News First Live Kannada


Leave a Reply

Your email address will not be published. Required fields are marked *