ಬೆಂಗಳೂರು: ನಗರದ ಮಲ್ಲೇಶ್ವರಂ ಬಳಿ ಇಂದು ಕಾರ್ಯಕ್ರಮವೊಂದನ್ನ ಉದ್ದೇಶಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ದೇಶ ಉಳಿಯಬೇಕಾದರೆ ಬಿಜೆಪಿ ಸರ್ಕಾರ ಕಿತ್ತಾಕಿ.. ಯಡಿಯೂರಪ್ಪ ಕೆಟ್ಟ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಅಡ್ಡಿಪಡಿಸಿದ ಓರ್ವ ವ್ಯಕ್ತಿ ಅಂಥ ಮಾತು ಹೇಳಬೇಡಿ.. ಅನ್ನ ಕೊಟ್ಟ ದೇವರು ಎಂದು ಹೇಳಿದ ಪ್ರಸಂಗ ನಡೆಯಿತು.

ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಕುಡಿದು ಬಿಟ್ಟಿದ್ದಾನೆ.. ಆಚೆಗೆ ಕಳಿಸ್ರೀ ಅವನ್ನ ಎಂದು ಹೇಳಿದ್ರು.. ಈ ವೇಳೆ ಕೆಲವರು ಆ ವ್ಯಕ್ತಿಯನ್ನ ಹೊರಗೆ ಕಳುಹಿಸಿದ್ರು.. ಮಾತು ಮುಂದುವರೆಸಿದ ಸಿದ್ದರಾಮಯ್ಯ.. ಇಷ್ಟು ಬೇಗ ಎಲ್ಲಿ ಸಿಕ್ತು ಇವನ್ಗೆ ಎಂದು ಹೇಳಿದ್ದಾರೆ. ಅಲ್ಲದೇ ಈ ಸರ್ಕಾರವೇ ಕುಡಿಸೋದು.. ಲಾಕ್​ಡೌನ್​ ಆದ್ರೂ ಮುಚ್ಚಿಲ್ಲ.. ಆದಾಯ ಬೇಕಲ್ಲ ಎಂದು ಹೇಳಿಕೆ ನೀಡಿದ್ದಾರೆ.

The post ‘ಕುಡಿದು ಬಿಟ್ಟಿದ್ದಾನೆ.. ಆಚೆಗೆ ಕಳಿಸ್ರೀ ಅವನ್ನ..’ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಕುಡುಕನ ಕಿರಿಕ್ appeared first on News First Kannada.

Source: newsfirstlive.com

Source link