ಬೆಂಗಳೂರು: ಭಗ್ನ ಪ್ರೇಮಿಯೋರ್ವ ಕುಡಿದ ಮತ್ತಿನಲ್ಲಿ ಬಸವೇಶ್ವರ ನಗರ ಮತ್ತು ಮಹಾಲಕ್ಷ್ಮೀ ಬಡಾವಣೆ ಸುತ್ತಮುತ್ತ ನಿಲ್ಲಿಸಿರುವ ಕಾರುಗಳ ಗಾಜು ಪುಡಿಪುಡಿ ಮಾಡುವ ಮೂಲಕ ಪುಂಡಾಟ ಮೆರೆದಿದ್ದಾನೆ. ಮಹಾಲಕ್ಷ್ಮೀ ಲೇಔಟ್ ನಿವಾಸಿ ಸತೀಶ್ (26) ಎಂಬಾ ಕಿಡಿಗೇಡಿ ಈ ಕೃತ್ಯ ಎಸಗಿದ್ದು ಈಗ ಬಸವೇಶ್ವರ ನಗರ ಪೊಲೀಸರ ಅತಿಥಿಯಾಗಿದ್ದಾನೆ.

ಬಸವೇಶ್ವರ ನಗರ ಮತ್ತು ಕುರುಬರಹಳ್ಳಿ ಪೈಪ್​​ಲೈನ್​​​ ಅಪಾರ್ಟ್​​ಮೆಂಟ್​ ಬಳಿ ಸುಮಾರು 12ಕ್ಕೂ ಹೆಚ್ಚು ಕಾರುಗಳ ಗಾಜುಗಳನ್ನು ದೊಣ್ಣೆಯಿಂದ ಹೊಡೆದು ಚೂರುಚೂರು ಮಾಡಿದ್ದಾನೆ. ಈತನೊಂದಿಗೆ ಇನ್ನಿಬ್ಬರು ಕಿಡಿಗೇಡಿಗಳು ಈ ಕೃತ್ಯದಲ್ಲಿ ಪಾತ್ರದಾರರು ಎಂದೇಳಲಾಗುತ್ತಿದೆ.

ಇನ್ನು, ವಿಷಯ ತಿಳಿದ ಕೂಡಲೇ ಎರಡು ಸ್ಥಳಗಳಿಗೂ ಭೇಟಿ ನೀಡಿದ ಬಸವೇಶ್ವರ ಪೊಲೀಸರು ಪರಿಶೀಲಿಸಿದ್ದಾರೆ. ತಡ ರಾತ್ರಿ 1.30 ಗಂಟೆ ಸುಮಾರಿಗೆ ಈ ಕೃತ್ಯ ಎಸಗಿದ ಆರೋಪಿಗಳ ಬೆನ್ನತ್ತಿದ ಪೊಲೀಸರು ಈಗ ಓರ್ವನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಸತೀಶ್​​​ ಬಸವೇಶ್ವರ ನಗರದ ಪೊಲೀಸ್​​ ಠಾಣೆಯಲ್ಲಿ ಜೈಲು ಕಂಬಿ ಎಣಿಸುತ್ತಿದ್ದು, ಉಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: ಜೈಲಿನಲ್ಲೂ ಮಾರಕಾಸ್ತ್ರ ಇಟ್ಕೊಂಡು ರೌಡಿಸಂ; ಬಾಂಬೆ ಸಲಿಂ ವಿರುದ್ಧ ದಾಖಲಾಯ್ತು FIR

The post ಕುಡಿದ ಮತ್ತಿನಲ್ಲಿ 12ಕ್ಕೂ ಹೆಚ್ಚು ಕಾರುಗಳ ಗಾಜು ಪುಡಿಪುಡಿ ಮಾಡಿದ ಭಗ್ನ ಪ್ರೇಮಿ ಅರೆಸ್ಟ್​ appeared first on News First Kannada.

Source: newsfirstlive.com

Source link