ಧಾರವಾಡ: ಮದ್ಯ ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಜಯನಗರ ಲಾಸ್ಟ್ ಸ್ಟಾಪ್ ಬಳಿ ಇರುವ ದುರ್ಗಾದೇವಿ ಕಾಲೊನಿಯಲ್ಲೇ ಈ ಘಟನೆ ನಡೆದಿದ್ದು,ಭೀಮವ್ವ ಶಿಂಧೆ (70) ಎಂಬವರೇ ಮೊಮ್ಮಗನಿಂದ ಹತ್ಯೆಗೀಡಾದವಳು.

ದತ್ತಾತ್ರೇಯ ಎಂಬಾತ ಪ್ರತಿದಿನ ಮದ್ಯ ಕುಡಿಯಲು ಹಣ ಕೊಡಿ ಎಂದು ತನ್ನ ತಾಯಿ ಹಾಗೂ ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದ. ಕಳೆದ ರಾತ್ರಿ ಕೂಡ ನಡೆದ ಈ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ದತ್ತಾತ್ರೇಯ ಕಲ್ಲಿನಿಂದ ತನ್ನ ಅಜ್ಜಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಅಲ್ಲದೇ ತನ್ನ ತಾಯಿ ಗೌರವ್ವಳ ಮೇಲೂ ಹಲ್ಲೆ ಮಾಡಿದ್ದು, ಆಕೆಯೂ ಗಂಭೀರವಾಗಿ ಗಾಯಗೊಂಡಿದ್ದಾಳೆ.

ನಿನ್ನೆ ತಡರಾತ್ರಿಯೇ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಿದಾನಂದ ಸವದಿ ಕಾರು ಚಾಲನೆ ಮಾಡ್ತಿರಲಿಲ್ಲ: ಎಸ್‍ಪಿ ಲೋಕೇಶ್ ಜಗಲಾಸರ್

The post ಕುಡಿಯಲು ಹಣ ಕೊಡಲಿಲ್ಲವೆಂದು ಅಜ್ಜಿಯನ್ನೇ ಕೊಂದ ಮೊಮ್ಮಗ appeared first on Public TV.

Source: publictv.in

Source link