ಕೊಡಗು: ಕುಡಿಯಲು ಮದ್ಯ ಸಿಗಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕಾಲನ್ನ ತಾನೇ ಕತ್ತರಿಸಿಕೊಂಡ ವಿಲಕ್ಷಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಪಾಪಣ್ಣ ಹೀಗೆ ಮಾಡಿಕೊಂಡಿದ್ದಾನೆ. ಮದುವೆ ಸಮಾರಂಭಗಳಲ್ಲಿ ವಾಲಗ ವಾದ್ಯ ನುಡಿಸುವ ಪಾಪಣ್ಣ ಲಾಕ್ ಡೌನ್​ನಿಂದ ಸಮಾರಂಭಗಳು ನಡೆಯದೆ ಖಿನ್ನತೆಗೆ ಒಳಗಾದಿದ್ದ ಎನ್ನಲಾಗಿದೆ. ಹಲವು ವರ್ಷಗಳಿಂದ ಮದ್ಯವ್ಯಸನಿಯಾಗಿದ್ದ ಈ ಆಸಾಮಿ ಲಾಕ್​ಡೌನ್ ವೇಳೆ ಸೂಕ್ತ ಸಮಯಕ್ಕೆ ಮದ್ಯ ಸಿಗದಿದ್ದರಿಂದ ಮದ್ಯ ತಂದುಕೊಡುವಂತೆ ಮನೆಯವರೊಂದಿಗೆ ಜಗಳವಾಡುತ್ತಿದ್ದನಂತೆ.

ಬುಧವಾರ ರಾತ್ರಿ ಮನೆಯಲ್ಲಿದ್ದ ಪಾಪಣ್ಣ ಮದ್ಯ ಸಿಗದ ಕಾರಣಕ್ಕೆ ಕೋಪದಿಂದ ತನ್ನ ಕಾಲಿಗೆ ತಾನೇ ಮಚ್ಚು ಬೀಸಿದ್ದಾನೆ. ಮಚ್ಚು ಬೀಸಿದ ರಭಸಕ್ಕೆ ಪಾಪಣ್ಣನ ಬಲಗಾಲು, ತುಂಡಾಗಿ ನೆಲದ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಪಾಪಣ್ಣರನ್ನ ಸ್ಥಳೀಯರು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 

The post ಕುಡಿಯೋದಕ್ಕೆ ಮದ್ಯ ಸಿಕ್ಕಿಲ್ಲ ಅಂತ ತನ್ನ ಕಾಲನ್ನೇ ಕತ್ತರಿಸಿಕೊಂಡ ವ್ಯಸನಿಯ ಕಥೆ ಇದು appeared first on News First Kannada.

Source: newsfirstlive.com

Source link