ಕಾನ್ಪುರ ಟೆಸ್ಟ್ನ ನಿರ್ಣಾಯಕ ದಿನದಾಟದ ಮೊದಲ ಸೆಷನ್ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿದೆ. ನಿನ್ನೆ 4 ರನ್ಗೆ 1 ವಿಕೆಟ್ ಉರುಳಿಸಿ ಆರಂಭಿಕ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ, ಇಂದಿನ ಮೊದಲ ಸೆಷನ್ ಸಂಪೂರ್ಣ ನಿರಾಸದಾಯಕ ಪ್ರದರ್ಶನದ ಮೂಲಕ, ನಿರಾಸೆ ಮೂಡಿಸಿದೆ.
280 ರನ್ಗಳ ಹಿನ್ನಡೆಯೊಂದಿಗೆ ಅಂತಿಮ ದಿನದಾಟ ಆರಂಭಿಸಿದ ಟಾಮ್ ಲಾಥಮ್, ಸೋಮರ್ವಿಲ್ಲೆ 2ನೇ ವಿಕೆಟ್ಗೆ, ಬಿಗ್ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದಾರೆ. ನಿನ್ನೆ 3 ರನ್ ಗಳಿಸಿ ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದ ಟಾಮ್ ಲಾಥಮ್, 96 ಎಸೆತಗಳಲ್ಲಿ 35 ರನ್ ಹಾಗೂ ವಿಲಿಯಮ್ ಸೋಮರ್ವಿಲ್ಲೆ 109 ಎಸೆತಗಳಲ್ಲಿ 36 ರನ್ ಗಳಿಸಿದ್ದಾರೆ.
ಭೋಜನ ವಿರಾಮಕ್ಕೂ ಮುನ್ನ ಮುರಿಯದ ಎರಡನೇ ವಿಕೆಟ್ಗೆ 76 ರನ್ಗಳ ಜೊತೆಯಾಟವಾಡಿದ್ದಾರೆ. ಇದರೊಂದಿಗೆ 1 ವಿಕೆಟ್ ನಷ್ಟಕ್ಕೆ ನ್ಯೂಜಿಲೆಂಡ್ 79 ರನ್ ಗಳಿಸಿದೆ.. ಸದ್ಯ 205 ರನ್ಗಳ ಸವಾಲಿನ ಮೊತ್ತ ನ್ಯೂಜಿಲೆಂಡ್ ಮುಂದಿದ್ದು, 9 ವಿಕೆಟ್ಗಳ ಉರುಳಿಸುವ ಚಾಲೆಂಜ್ ಟೀಮ್ ಇಂಡಿಯಾ ಬೌಲರ್ಗಳ ಮುಂದಿದೆ.