ಕುಬರನಾಗಲು ಹೋದ ಸೆಕ್ಯೂರಿಟಿ ಗಾರ್ಡ್; 3 ವಜ್ರದ ಉಂಗುರ ಕದ್ದು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?


ಸೆಕ್ಯೂರಿಟಿ ಗಾರ್ಡ್​​ ಆಗಿದ್ದೋನಿಗೆ ಕೋಟಿ ಸಂಪತ್ತಿನ ಒಡೆಯನಾಗೋ ಕನಸು ಹುಟ್ಟಿಕೊಂಡಿತ್ತು. ಕೋಟಿ ಕುಬೇರನಾಗಲು ಮಾಡಿದ್ದು ಮಾತ್ರ ಕನ್ನ ಹಾಕೋ ಕೆಲಸ. ಒಂದೇ ಸಲಕ್ಕೆ ಶ್ರೀಮಂತನಾಗೋ ಆಸೆಗೆ ವಜ್ರದ ಉಂಗುರಗಳನ್ನೇ ಎಗರಿಸಿದ್ದ. ಆದರೇ ವಜ್ರ ದೋಚಿದ್ದ ಖದೀಮ ಸದ್ಯ ಕಬ್ಬಿಣದ ಸರಳುಗಳ ಹಿಂದೆ ಸೆರೆಯಾಗಿದ್ದಾನೆ.

ಯೆಸ್​.. ಚಿಕ್ಕಬಳ್ಳಾಪುರದವನಾದ ಮಂಜುನಾಥ್ ಅಂತಿಂಥಾ ಕಳ್ಳನಲ್ಲ. ದುಡ್ಡು ಮಾಡೋ ಆಸೆಗೆ ಸೀದಾ ಡೈಮಂಡ್​ ರಿಂಗ್​ಗಳನ್ನೇ ದೋಚಿರೋ ಖದೀಮ. ಆದರೆ ಕದ್ದ ಡೈಮಂಡ್​ ರಿಂಗ್​ಗಳಿಂದಾನೇ ಇಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಅತಿಥಿಯಾಗಿದ್ದಾನೆ.

ವಿಲ್ಲಾವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿದ್ದ ಮಂಜುನಾಥ್, ವಿಲ್ಲಾಗೆ ಬರ್ತಿದ್ದ ಶ್ರೀಮಂತರನ್ನು ಕಂಡು ತಾನು ಅವರಂತೆ ಕುಬೇರನಾಗಬೇಕು ಅಂತಾ ಕನಸು ಕಂಡಿದ್ದಾನೆ. ಇದಕ್ಕಾಗಿ ವಿಲ್ಲಾದಲ್ಲಿ ವಾಸವಿದ್ದ ವಿದೇಶಿ ಪ್ರಜೆಯ ಮೂರು ಡೈಮಂಡ್ ರಿಂಗ್ ಎಗರಿಸಿದ್ದಾನೆ.

ಇದನ್ನೂ ಓದಿ: ಬಂಗಾರಕ್ಕಿಂತಲೂ ಹೆಚ್ಚು ಬಿಟ್​ ಕಾಯಿನ್​​ ಮೌಲ್ಯ: ಹೂಡಿಕೆ ಮಾಡುವ ಮುನ್ನ ಈ ಸ್ಟೋರಿ ಓದಿ

ಕದ್ದ ಡೈಮಂಡ್ ರಿಂಗ್ ಮಾರಲು ಮಂಜುನಾಥ್ ಬೆಂಗಳೂರಿಗೆ ಬಂದಿದ್ದಾನೆ. ಆದರೆ ಮಂಜುನಾಥ್​ ಮೇಲೆ ಅನುಮಾನಗೊಂಡ ವಜ್ರದ ವ್ಯಾಪ್ಯಾರಿಗಳು ಪೊಲೀಸರಿಗೆ ಮಾಹಿತಿ ನೀಡ್ತಾರೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಚಾಲಾಕಿ ಮಂಜುನಾಥ್​ನನ್ನು ಬಂಧಿಸಿದ್ದಾರೆ.

ಒಟ್ನಲ್ಲಿ ಆರೋಪಿ ಮಂಜುನಾಥ್​ಗೆ ತಾನು ಕದ್ದ ವಜ್ರದ ಉಂಗುರಗಳೇ ಉರುಳಾಗಿದ್ದು, ಕದ್ದಷ್ಟೇ ಸಲೀಸಾಗಿ ಮಾರಾಟ ಮಾಡಲು ಸಾಧ್ಯವಾಗದೇ ಜೈಲು ಸೇರಿದ್ದಾನೆ.ಕೋಟಿ ಕುಬೇರನಾಗಬೇಕು ಅಂತಾ ಕನಸು ಕಂಡಿದ್ದೇನೋ ಸರಿ. ಆದರೆ ಕಳ್ಳತನದ ಮೂಲಕ ಆ ಕನಸು ನನಸು ಮಾಡಲು ಹೊರಟ್ಟಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

News First Live Kannada


Leave a Reply

Your email address will not be published. Required fields are marked *