ಕೊಪ್ಪಳ: ಜಿಲ್ಲೆಯಲ್ಲಿ ಆ್ಯಕ್ಟೀವ್ ಆಗಿದ್ದ ಜೆಡಿಎಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಕಾಂಗ್ರೆಸ್​ಗೆ ಸೇರ್ಪಡೆ ಆಗಿದ್ದಾರೆ.
ಮಾಜಿ ಸಚಿವ ಜಮೀರ್‌ ಅಹಮ್ಮದ್ ಮೂಲಕ ಶಾಸಕ‌ ರಾಘವೇಂದ್ರ ಹಿಟ್ನಾಳ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಮುಂಬರುವ ಚುನಾವಣೆಗೆ ಗ್ರೌಂಡ್ ವರ್ಕ್ ಮಾಡಲು ಸೈಯದ್​​ರನ್ನ ಹಿಟ್ನಾಳ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಸ್ಥಳೀಯವಾಗಿ ಜೆಡಿಎಸ್​ನಲ್ಲಿ ಕೆ.ಎಂ.ಸೈಯದ್ ನಿರ್ಲಕ್ಷ್ಯಕ್ಕೊಳಪಟ್ಟಿದ್ದರು. ಹಾಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೊಪ್ಪಳ ಕ್ಷೇತ್ರದಿಂದ ಸೈಯದ್ ಸ್ಪರ್ಧಿಸಿದ್ದರು.

ಒಂದೆಲ್ಲಾ ಒಂದು ಒಂದು ಸಾಮಾಜಿಕ ಸೇವೆ ಮಾಡುವ ಮೂಲಕ ರಾಜಕೀಯದಲ್ಲಿ ಸಕ್ರಿಯವಾಗಿರುವ ಸೈಯದ್.. ಹೋಟೆಲ್ ಉದ್ಯಮ, ರಿಯಲ್ ಎಸ್ಟೇಟ್ ಉದ್ಯಮಿಯಾಗಿಯೂ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತಷ್ಟು ಮುಸ್ಲಿಂ ಮತಗಳನ್ನು ಸೆಳೆಯಲು ಕೆಎಂ ಸೈಯದ್​​ರನ್ನ ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಂಡಿದೆ.

 

The post ಕುಮಾರಸ್ವಾಮಿಗೆ ಶಾಕ್ ಕೊಟ್ಟ ಜಮೀರ್​​.. ಕೊಪ್ಪಳ JDS​ ನಾಯಕನ ಕಾಂಗ್ರೆಸ್​ಗೆ ಸೆಳೆಯುವಲ್ಲಿ ಸಕ್ಸಸ್  appeared first on News First Kannada.

Source: newsfirstlive.com

Source link