ಕುಮಾರಸ್ವಾಮಿಯೇ ಮುಂದಿನ ಮುಖ್ಯಮಂತ್ರಿ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ: ರೇವಣ್ಣ | Kumaraswamy is going to be next CM, its Kodimutt seer’s prediction: HD Revanna ARB


ಜೆಡಿ(ಎಸ್) ಪಕ್ಷದ ಹಿರಿಯ ನಾಯಕ ಹೆಚ್ ಡಿ ರೇವಣ್ಣ (HD Revanna) ಅವರು ಈಗಲೂ ರಾಜಕಾರಣದ ಬಗ್ಗೆ ಮಾತಾಡುವಾಗ ತಮ್ಮ ಕುಟುಂಬವನ್ನು ಮಾತ್ರ ಉಲ್ಲೇಖಿಸುತ್ತಾರೆ. ಪೇಪರ್ ಟೌನ್ ಎಂದೇ ಹೆಸರಾಗಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ (Bhadravati) ಶನಿವಾರ ನಡೆದ ಜನತಾ ಜಲಧಾರೆ (Janata Jaladhare) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ರೇವಣ್ಣನವರು ತಮ್ಮ ಬಗ್ಗೆ, ತಮ್ಮ ತಂದೆ ಮತ್ತು ತಮ್ಮ ಸಹೋದರನ ಸಾಧನೆಗಳ ಬಗ್ಗೆ ಮಾತ್ರ ಮಾತಾಡಿದರು. ಧರ್ಮಸಿಂಗ್ ಅವರ ಸರ್ಕಾರದಲ್ಲಿ ತಾವು ಇಂಧನ ಸಚಿವರಾಗಿದ್ದಾಗ ರಾಜ್ಯದಲ್ಲಿ 660 ಸಬ್ ಸ್ಟೇಶನ್ ಗಳನ್ನು ಸ್ಥಾಪಿಸಿದ್ದಲ್ಲದೆ 500 ಕಾರ್ಯ ನಿರ್ವಾಹಕ ಇಂಜಿನೀಯರ್, 10-12 ಸಾವಿರ ಜ್ಯೂನಿಯರ್ ಇಂಜಿನೀರ್ ಮತ್ತು ಲೈನ್ಮನ್ ಗಳನ್ನು ನೇಮಕ ಮಾಡಿದ್ದು ಲಂಚದ ರೂಪದಲ್ಲಿ ಯಾರಿಂದಲೂ ರೂ. 10 ಕೂಡ ಪಡೆದಿಲ್ಲ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಕೋರಿಕೆ ಮೇರೆಗೆ ಶಿಕಾರಿಪುರನಲ್ಲಿ 220 ಕೆವಿಯ ಸಬ್ ಸ್ಟೇಶನ್ ಸ್ಥಾಪಿಸಿದ್ದನ್ನೂ ರೇವಣ್ಣ ಹೇಳಿಕೊಂಡರು.

ಅದಾದ ಮೇಲೆ ಅವರು ಹೆಚ್ ಡಿ ದೇವೇಗೌಡರ ನೀರಾವರಿ ಕ್ಷೇತ್ರದಲ್ಲಿ ಮಾಡಿದ ಸಾಧನಗೆಳ ಬಗ್ಗೆ ಮಾತಾಡಿದರು. ಕಬಿನಿ, ಹಾರಂಗಿ, ಕೃಷ್ಣೆ, ಘಟಪ್ರಭಾ ಮೊದಲಾದ ನೀರಾವರಿ ಯೋಜನೆಗಳನ್ನು ದೇವೇಗೌಡರೇ ಆರಂಭಿಸಿದ್ದು, ಇನ್ನೂ ಹತ್ತು ವರ್ಷಗಳ ಕಾಲ ಅವರ ಸೇವೆ ರಾಜ್ಯಕ್ಕೆ ಲಭ್ಯವಿದ್ದಿದ್ದರೆ ರಾಜ್ಯದ ಪ್ರತಿ ಮೂಲೆಯಲ್ಲಿ ನೀರಾವರಿ ಯೋಜನೆಗಳು ಜಾರಯಲ್ಲಿರುತ್ತಿದ್ದವರು ಎಂದು ರೇವಣ್ಣ ಹೇಳಿದರು.

ನಂತರ ಕುಮಾರಸ್ವಾಮಿಯವರ ಬಗ್ಗೆ ಮಾತಾಡಿದ ಅವರು, ಮುಂದಿನ ಮುಖ್ಯಮಂತ್ರಿ ಅವರೇ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ ಎಂದರು. ಅವರು ಪುನಃ ಸಿಎಮ್ ಸ್ಥಾನ ಅಲಂಕರಿಸುವುದು ಬ್ರಹ್ಮಲಿಖಿತ ಅದನ್ನು ಯಾರೂ ಬದಲಾಯಿಸುವುದು ಸಾಧ್ಯವಿಲ್ಲ ಎಂದ ರೇವಣ್ಣ, ಕುಮಾರಸ್ವಾಮಿ ರಾಜ್ಯದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತಂದಿದ್ದಾರೆ ಅಂತ ಹೇಳಿದರು.

2018 ರಲ್ಲಿ ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ಮತ್ತು ದೇವೇಗೌಡರ ಮನೆಗೆ ಬಂದು ಅವರ ಕೈಕಾಲು ಹಿಡಿದ ಬಳಿಕ ಮುಖ್ಯಮಂತ್ರಿಯಾದ ಕುಮಾರಸ್ವಾಮಿ 14 ತಿಂಗಳು ಹೇಗೆ ಅಧಿಕಾರ ನಡೆಸಿದರು ಅಂತ ಎಲ್ಲರಿಗೂ ಗೊತ್ತಿದೆ. ಹಾಗಾಗಿ 2023 ರ ಚುನಾವಣೆಯಲ್ಲಿ ರಾಜ್ಯದ ಮತದಾರರು ಎಲ್ಲಾದರಲ್ಲೂ ಪರ್ಸೆಂಟೇಜ್ ಪಡೆಯುವ ರಾಷ್ಟ್ರೀಯ ಪಕ್ಷಗಳನ್ನು ಬದಿಗೊತ್ತಿ ಜೆಡಿ(ಎಸ್) ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ರೇವಣ್ಣ ಹೇಳಿದರು.

TV9 Kannada


Leave a Reply

Your email address will not be published.