ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿಯನ್ನ ಭೇಟಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಯಾಕಂದ್ರೆ ಇತ್ತೀಚೆಗೆ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಹೆಚ್​​ಡಿಕೆ ಮಧ್ಯೆ ಜಟಾಪಟಿ ನಡೆದಿತ್ತು. ಇಬ್ಬರ ಮಧ್ಯೆ ವಾಕ್ಸಮರ ಕೊಂಚ ತಣ್ಣಗಾಗುತ್ತಿದ್ದಂತೆ, ದರ್ಶನ್​ಗೆ ಸಂಬಂಧಿಸಿದ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.

ಹೀಗಾಗಿ ಸುಮಲತಾ ಹಾಗೂ ಹೆಚ್​​ಡಿಕೆ ಸಮರದ ಮಧ್ಯೆ ದರ್ಶನ್​ ಅವರನ್ನ ಉದ್ದೇಶಪೂರ್ವಕವಾಗಿ ಸಿಲುಕಿಸಿದ್ರಾ? ಮಾಜಿ ಸಿಎಂ ಅವರು ಇಂದ್ರಜಿತ್ ಲಂಕೇಶ್ ಅವರನ್ನು ಅಸ್ತ್ರವಾಗಿ ಬಳಸಿಕೊಂಡ್ರಾ? ಇಂದ್ರಜಿತ್ ಲಂಕೇಶ್ ಇಂದ ಗೃಹ ಸಚಿವರಿಗೆ ದೂರು ಕೊಡಿಸಿದ್ರಾ ಹೆಚ್ಡಿಕೆ? ಸಂಸದೆ ಸಮಲತಾಗೆ ಟಕ್ಕರ್ ಕೊಡಲು ಮಾಜಿ ಸಿಎಂ ಕುಮಾರಸ್ವಾಮಿ ಈ ರೀತಿಯ ಮಾಸ್ಟರ್ ಪ್ಲಾನ್ ಮಾಡಿದ್ರಾ ಅನ್ನೋ ಚರ್ಚೆ ಇದೀಗ ಶುರುವಾಗಿದೆ.

ಇನ್ನು ಈ ಭೇಟಿಯ ಬಗ್ಗೆ ಹೆಚ್​​ಡಿಕೆ ಆಗಲಿ ಅಥವಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಗಿಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

The post ಕುಮಾರಸ್ವಾಮಿ-ಇಂದ್ರಜಿತ್ ಭೇಟಿ; ದರ್ಶನ್, ಸುಮಲತಾ ಪ್ರಕರಣಕ್ಕೆ ಹೊಸ ಟ್ವಿಸ್ಟ್​..? appeared first on News First Kannada.

Source: newsfirstlive.com

Source link