ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರ ವಿರುದ್ಧ ಲಂಚ ಆರೋಪ! ಆರ್ಟಿಐ ಕಾರ್ಯಕರ್ತನಿಂದ ಡಿಸಿಪಿಗೆ ದೂರು | Bengaluru Kumaraswamy layout station Policer are accused of bribery


ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರ ವಿರುದ್ಧ ಲಂಚ ಆರೋಪ! ಆರ್ಟಿಐ ಕಾರ್ಯಕರ್ತನಿಂದ ಡಿಸಿಪಿಗೆ ದೂರು

ಸಾಂದರ್ಭಿಕ ಚಿತ್ರ

ನಾಗರಾಜ್ ಬನಶಂಕರಿ ಬಳಿ ಅನ್ನಪೂರ್ಣ ಟೂಲ್ಸ್ ಅಂಗಡಿ ಹೊಂದಿದ್ದಾರೆ. ಅಲ್ಲಿ ರಂಜಿತ್ ಕುಮಾರ್ ಕೆಲಸ ಮಾಡುತ್ತಿದ್ದಾನೆ. ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು: ಕುಮಾರಸ್ವಾಮಿ ಲೇಔಟ್ (Kumaraswamy Layout ) ಠಾಣೆ ಪೊಲೀಸರ ವಿರುದ್ಧ ಲಂಚ (Bribery) ಆರೋಪ ಕೇಳಿಬಂದಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ಆರ್ಟಿಐ ಕಾರ್ಯಕರ್ತ ದೂರು ನೀಡಿದ್ದಾರೆ. ಬಾರ್ ಗಲಾಟೆಗೆ ಸಂಬಂಧಿಸಿ ವಿಚಾರಣೆ ನೆಪದಲ್ಲಿ ಕರೆದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಾಗರಾಜ್ ಎಂಬುವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ರಂಜಿತ್ ಕುಮಾರ್ನನ್ನು ವಿಚಾರಣೆಗೆಂದು ಠಾಣೆಗೆ ಕರೆದು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸರು ಗಲಾಟೆ ಮಾಡಿದ ಆರೋಪಿಗಳನ್ನು ತೋರಿಸುವಂತೆ ಹೇಳಿದ್ದರು. ಈ ವೇಳೆ ಅದಕ್ಕೂ ನನಗೂ ಸಂಬಂಧವಿಲ್ಲ ಅಂತ ರಂಜಿತ್ ಕುಮಾರ್ ಹೇಳಿದ್ದಾನಂತೆ. ಅದಕ್ಕೆ ವಿನಾಕಾರಣ ಹಲ್ಲೆ ಮಾಡಿ ಪೊಲೀಸರು 15,000 ರೂ. ಲಂಚ ಪಡೆದಿದ್ದಾರೆ. ಇನ್ನು ಪೊಲೀಸರು ಗಲಾಟೆಯಲ್ಲಿ ರಂಜಿತ್ ಭಾಗಿಯಾಗಿದ್ದ ಅಂತ ಹೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಆರ್ಟಿಐ ಕಾರ್ಯಕರ್ತ ನಾಗರಾಜ್ಗೆ ನಿಂದನೆ ಮಾಡಿದ್ದಾರಂತೆ.

ನಾಗರಾಜ್ ಬನಶಂಕರಿ ಬಳಿ ಅನ್ನಪೂರ್ಣ ಟೂಲ್ಸ್ ಅಂಗಡಿ ಹೊಂದಿದ್ದಾರೆ. ಅಲ್ಲಿ ರಂಜಿತ್ ಕುಮಾರ್ ಕೆಲಸ ಮಾಡುತ್ತಿದ್ದಾನೆ. ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ರೆ ಆರೋಪಿಯನ್ನು ಬಿಟ್ಟು ಕಳಿಸಿದ್ದು ಯಾಕೆ? ಆರೋಪಿ ಬಳಿ ಹಣ ಪಡೆದು ಬಿಟ್ಟು ಕಳುಹಿಸಿದ್ರಾ? ಎಂದು ಆರೋಪಿಸಿ ಇಬ್ಬರು ಕ್ರೈಂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಡಿಸಿಪಿ ಹರೀಶ್ ಪಾಂಡೆಗೆ ದೂರು ಸಲ್ಲಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *