ಕುಲ್​ಗಾಂವ್​​ನಲ್ಲಿ ಭದ್ರತಾ ಪಡೆಗಳು-ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ; ಪೊಲೀಸ್​ ಹುತಾತ್ಮ, ಉಗ್ರ ಸಾವು | A Terrorist and policeman killed in Kulgam of Jammu Kashmir encounter


ಕುಲ್​ಗಾಂವ್​​ನಲ್ಲಿ ಭದ್ರತಾ ಪಡೆಗಳು-ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ; ಪೊಲೀಸ್​ ಹುತಾತ್ಮ, ಉಗ್ರ ಸಾವು

ಪ್ರಾತಿನಿಧಿಕ ಚಿತ್ರ

ಜಮ್ಮು-ಕಾಶ್ಮೀರದ ಕುಲಗಾಂವ್ (Kulgam District In Jammu-Kashmir)​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಷ್​ ಇ ಮೊಹಮ್ಮದ್​ AJaish-e-Mohammad) ಸಂಘಟನೆಯ ಉಗ್ರ ಮತ್ತು ಓರ್ವ ಪೊಲೀಸ್​ ಸಿಬ್ಬಂದಿ ಮೃತರಾಗಿದ್ದಾರೆ.  ಹಾಗೇ, ಮೂವರು ಯೋಧರು ಸೇರಿ ಒಟ್ಟು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಕುಲಗಾಂವ್​ನ ಪರಿವಾನ್​ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂದ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಶುರು ಮಾಡಿದ್ದವು.  ತಾವಿದ್ದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.ಅದಕ್ಕೆ ಪ್ರತಿಯಾಗಿ ಭದ್ರತಾ ತಂಡವೂ ಕೂಡ ಫೈರಿಂಗ್​ ನಡೆಸಿದೆ. ಉಗ್ರರ ಗುಂಡಿಗೆ ಪೊಲೀಸ್​ವೊಬ್ಬ ಮೃತಪಟ್ಟಿದ್ದಾರೆ. ಹಾಗೇ, ಭದ್ರತಾ ಪಡೆಗಳ ಗುಂಡೇಟಿಗೆ ಭಯೋತ್ಪಾದಕನೂ ಒಬ್ಬ ಸತ್ತಿದ್ದಾನೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್​ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಕುಲಗಾಂವ್​​ ಜಿಲ್ಲೆಯ ಹುಸ್ಸೇನಿಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿತ್ತು. ಅವರಿಬ್ಬರೂ ಸ್ಥಳೀಯ ಉಗ್ರರೇ ಆಗಿದ್ದರು. ಅಲ್​-ಬದ್ರ್​ ಎಂಬ ಸಂಘಟನೆಗೆ ಸೇರಿದವರಾಗಿದ್ದರು.  ಕಳೆದ 9 ದಿನಗಳಲ್ಲಿ ಏಳು ಎನ್​​ಕೌಂಟರ್​​ಗಳು ನಡೆದಿದ್ದು, ಒಟ್ಟು 13 ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದೂ ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ.

TV9 Kannada


Leave a Reply

Your email address will not be published. Required fields are marked *