ಮಂಗಳೂರು: ಕೊಲ್ಲಿ ರಾಷ್ಟ್ರ ಕುವೈತ್​​ನಿಂದ ಮಂಗಳೂರಿಗೆ ಮತ್ತೆ ಎರಡು ಕಂಟೇನರ್​ ಮೆಡಿಕಲ್ ಆಕ್ಸಿಜನ್ ಬಂದಿದೆ. ಎರಡು ಕಂಟೇನರ್​​ಗಳಿಂದ 40 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಲಭ್ಯವಾಗಿದೆ.

ಐಎನ್‍ಎಸ್ ತಬರ್ ನೇವಲ್ ವಾರ್ ಶಿಪ್ ಕುವೈತ್​ನಿಂದ ಆಕ್ಸಿಜನ್ ಕಂಟೈನರ್​ಗಳನ್ನ ಹೊತ್ತು ತಂದಿದ್ದು, ಕಂಟೈನರ್​ಗಳು ನವಮಂಗಳೂರು ಬಂದರು ತಲುಪಿದೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೊಲ್ಲಿ ರಾಷ್ಟ್ರ ಕುವೈತ್ ಸಮುದ್ರ ಸೇತು ಯೋಜನೆಯಡಿ ಸಹಾಯಹಸ್ತ ಚಾಚಿದೆ. ನಿನ್ನೆಯಷ್ಟೇ ಕುವೈತ್ ಹಾಗೂ ಕತಾರ್ ನಿಂದ ಇಂದು ಮಂಗಳೂರಿಗೆ 2 ಆಕ್ಸಿಜನ್ ಕಂಟೇನರ್ ಬಂದಿಳಿದಿತ್ತು. ಈ ಕಂಟೈನರ್ ಗಳಲ್ಲಿ 400 ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಹಾಗೂ 47 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೇವಲ್ ವಾರ್ ಶಿಪ್ ಐಎನ್‍ಎಸ್ ಕೊಲ್ಕತ್ತಾ ಹೊತ್ತು ತಂದಿತ್ತು.

The post ಕುವೈತ್‍ನಿಂದ ಮಂಗಳೂರು ಬಂದರಿಗೆ ಬಂದಿಳಿದ 40 ಮೆಟ್ರಿಕ್ ಟನ್ ಆಕ್ಸಿಜನ್ appeared first on News First Kannada.

Source: newsfirstlive.com

Source link