ಕುಸು ಕುಸು ಅಂತಾ ಬಂದ ಸುಕುಮಾರಿ; ಮತ್ತೆ ಫ್ಯಾನ್ಸ್ ಎದೆಗೆ ಕಿಚ್ಟಿಟ್ಟ ನೋರಾ ಫತೇಹಿ


ಥಳಕು-ಬಳಕು-ಎದೆಗಿರಿವ ಅಂದ ಹೇಗಿರುತ್ತೆ? ಅಂತಾ ಯಾರಾದ್ರೂ ಕೇಳಿದ್ರೆ ಹೀಗಿರುತ್ತೆ ಅಂತಾ ಉದಹಾರಣೆ ಕೊಡೋ ಹಾಗೆ ಇರೋ ಬಾಲಿವುಡ್​​ನ ಸೂಪರ್ ಹಾಟ್ ಡ್ಯಾನ್ಸರ್​ ನೋರಾ ಫತೇಹಿ ಮತ್ತೊಮ್ಮೆ ರಸಿಕರೆದೆಗೆ ಕಿಚ್ಚಿಟ್ಟಿದ್ದಾರೆ.

ಸತ್ಯಮೇವ ಜಯತೆ-2 ಚಿತ್ರದ ಕುಸು ಕುಸು ಹಾಡನ್ನು ಟಿ ಸೀರೀಸ್ ಈಗಷ್ಟೇ ಬಿಡುಗಡೆಗೊಳಿಸಿದ್ದು, ಅದಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ಹಾಡನ್ನ ನೋಡಿ.. ಅದ್ರಲ್ಲೂ ನೋರಾ ಡ್ಯಾನ್ಸ್​ ಮೋಡಿ ನೋಡಿ ಮತ್ತೊಮ್ಮೆ ಫಿದಾ ಆಗಿದ್ದಾರೆ.

ಜಾನ್ ಅಬ್ರಾಹಂ ನಟನೆಯೇ ಸತ್ಯಮೇವ ಜಯತೆಯ ಎರಡನೇ ಭಾಗವಾಗಿರುವ ಈ ಚಿತ್ರದಲ್ಲಿ, ಬಾಲಿವುಡ್​ ಹಂಕ್ ಮೂರು ಪಾತ್ರಗಳಲ್ಲಿ ಮಿಂಚಿದ್ದಾರೆ. ಭೂಷಣ್ ಕುಮಾರ್ ಚಿತ್ರ ನಿರ್ಮಿಸಿದ್ದು ಬಹುತಾರಾಗಣವೇ ಇದ್ರಲ್ಲಿದೆ. ಚೆರಿ ಆನ್​ ದಿ ಕೇಕ್ ಅನ್ನೋ ಹಾಗೆ ನೋರಾ ಫತೇಹಿ ಡ್ಯಾನ್ಸ್ ಕೂಡ ಇದ್ದು, ಚಿತ್ರಕ್ಕೆ ಸೂಪರ್ ಖದರ್ ತಂದುಕೊಟ್ಟಿದೆ

 

The post ಕುಸು ಕುಸು ಅಂತಾ ಬಂದ ಸುಕುಮಾರಿ; ಮತ್ತೆ ಫ್ಯಾನ್ಸ್ ಎದೆಗೆ ಕಿಚ್ಟಿಟ್ಟ ನೋರಾ ಫತೇಹಿ appeared first on News First Kannada.

News First Live Kannada


Leave a Reply

Your email address will not be published.