ಖ್ಯಾತ ಕುಸ್ತಿಪಟು ದಿ ಗ್ರೇಟ್​ ಖಲಿ ಅಲಿಯಾಸ್​ ದಾಲಿಪ್ ಸಿಂಗ್ ರಾಣಾ ಅವರ ತಾಯಿ ವಿಧಿವಶರಾಗಿದ್ದಾರೆ.

ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಖಲಿ ಅವರ ತಾಯಿ ತಾಂಡಿ ದೇವಿ ಅವರನ್ನ ಕಳೆದ ವಾರ ಲುಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ನಿನ್ನೆ ಅವರು ಕೊನೆಯುಸಿರೆಳೆದಿದ್ದಾರೆ. ತಾಂಡಿ ದೇವಿ ಅವರಿಗೆ 75 ವರ್ಷ ವಯಸ್ಸಾಗಿತ್ತು.

ರಾಣಾ ಅಲಿಯಾಸ್​ ಖಲಿ 2000 ಇಸವಿಯಲ್ಲಿ ವೃತ್ತಿಪರ ಕುಸ್ತಿಗೆ ಪ್ರವೇಶ ಮಾಡಿದರು. WWE  ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಅವರು ಪಂಜಾಬ್ ಪೊಲೀಸ್​ ಅಧಿಕಾರಿಯಾಗಿದ್ದರು. WWE ಕೆರಿಯರ್​ ಸಂದರ್ಭದಲ್ಲಿ WWE ಚಾಂಪಿಯನ್ ಆಗಿ ಆದರು. ಖಲಿ ಈವರೆಗೆ ನಾಲ್ಕು ಹಾಲಿವುಡ್​ ಹಾಗೂ ಎರಡು ಬಾಲಿವುಡ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 2021ರ ಭಾಗವಾಗಿ WWE ಹಾಲ್ ಆಫ್ ಫೇಮ್​ಗೆ ಅವರ ಹೆಸರು ಸೇರ್ಪಡೆಯಾಗಿದೆ.

.

The post ಕುಸ್ತಿಪಟು ದಿ ಗ್ರೇಟ್​ ಖಲಿಗೆ ಮಾತೃ ವಿಯೋಗ appeared first on News First Kannada.

Source: newsfirstlive.com

Source link