2ನೇ ಇನ್ನಿಂಗ್ಸ್​ನಲ್ಲಿ ಬಿಗ್​ಬಾಸ್​ ಮನೆಯ ಸದಸ್ಯರು ಆಟಕ್ಕಿಂತ ವೈಯಕ್ತಿಕ ಕೆಸರೆರಚಾಟದಲ್ಲಿ ತೊಡಗಿದಂತೆ ಕಾಣುತ್ತಿದೆ. ಇದು ಹೊಸ ತಂತ್ರ ಕೂಡ ಆಗಿರಬಹುದು. ಇದರಲ್ಲಿ ಪ್ರಮುಖವಾಗಿ ನಿನ್ನೆ ನಡೆದ ಟಾಸ್ಕ್​ನಲ್ಲಿ ಆಟಕ್ಕಿಂತ ಒಂದು ಕಡೆ ಚಂದ್ರಚೂಡ್​ ಹಾಗೂ ಪ್ರಿಯಾಂಕಾ, ಮತ್ತೊಂದು ಕಡೆ ಅರವಿಂದ್​ ಹಾಗೂ ನಿಧಿ ಅವರ ಸದ್ದುಗದ್ದಲ ಜೋರಾಗಿತ್ತು.

ಬಿಗ್​ಬಾಸ್​ ನೀಡಿದ ಟಾಸ್ಕ್​ನಲ್ಲಿ ಕೆ.ಪಿ ಅರವಿಂದ್ ಅವರ ನೇತೃತ್ವದ ತಂಡ 2 ಸ್ಟಾರ್​ ಪಡೆದು ಮುನ್ನಡೆ ಸಾಧಿಸಿದೆ. ಇನ್ನೊಂದು ಕಡೆ ಮಂಜು ಅವರ ನೇತೃತ್ವದ ತಂಡ ತಮ್ಮ ಪೈಪೊಟಿಯನ್ನು ಮುಂದುವರೆಸಿದೆ. ಆದ್ರೆ ಇಲ್ಲಿ ಸೂಕ್ಷ್ಮವಾಗಿ ನೋಡಿದರೆ ಚಕ್ರವರ್ತಿ ಅವರು 2ನೇ ಇನ್ನಿಂಗ್ಸ್​ನಲ್ಲಿ ತಮ್ಮ ವರಸೆ ಬದಲಿಸಿದಂತಿದೆ. ಎಲ್ಲೋ ಒಂದು ಕಡೆ ಅವರು ಮೈಂಡ್​ ಗೇಮ್​ ಆಡುತ್ತಿದ್ದಾರೆ ಅನ್ನೋದು ಎದ್ದು ಕಾಣ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಯಾಗುತ್ತಿದೆ.

ನಿನ್ನೆ ನಡೆದ ಟಾಸ್ಕ್​ನಲ್ಲಿ ಗೆದ್ದ ತಂಡದಲ್ಲಿ ಇದ್ದ ಚಕ್ರವರ್ತಿ ಅವರು ಮಂಜು ತಂಡದಲ್ಲಿರುವ ಪ್ರಿಯಾಂಕಾ ಅವರ ಹತ್ತಿರ ಹೋಗಿ ಕೈ ಕುಲುಕಲು ಪ್ರಯತ್ನಿಸುತ್ತಾರೆ. ಇದಕ್ಕೆ ಪ್ರಿಯಾಂಕಾ ಅವರು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಭಾವಿಸಿದ ಅವರು, ಕೋಪಗೊಳ್ಳುತ್ತಾರೆ.

ಚಂದ್ರಚೂಡ್​: ಸ್ನೇಹದಲ್ಲಿ ಕೈಕುಲುಕಲು ಬಂದೆ. ಅದಕ್ಕೆ ಇಷ್ಟೊಂದು ನಕ್ರಾ ಮಾಡ್ತಿಯಾ. ನನ್ನ ತಪ್ಪು ಹೋಗಿ ಹೋಗಿ ನಿನ್ನ ಹತ್ತಿರಾ ಬಂದೇ ನೋಡು. ನನ್ನಾ ನೀನು ಏನ್​ ಅನ್ಕೊಂಡಿದ್ದಿಯಾ. ಹೀಗೆಲ್ಲಾ ನನ್ನ ಹತ್ತಿರ ಮಾತನಾಡ್ಬೇಡ.

ಪ್ರಿಯಾಂಕಾ: ನಾನು ಏನ್​ ಆಂದೆ ಅಂತಾ ಹೇಳಿ ನೀವು ಮೊದಲು.

ಚಂದ್ರಚೂಡ್​: ನಿಂಗೇ ಗೊತ್ತಿಲ್ವಾ ಏನ್​ ಅಂತಾ, ಏನೋ ವಿಶ್​ ಮಾಡೋಕೆ ಬಂದ್ರೆ ಇಷ್ಟೊಂದು ಸ್ಕೋಪ್​ ತಗೋತಿಯಾ, ಈ ನಕ್ರಾ ನನ್ನ ಹತ್ರ ಬೇಡ..

ಹೀಗೆ ಇಬ್ಬರ ನಡುವೆ ನಡೆದ ವಾಕ್ ​ಸಮರ ಯಾಕೋ ಮುಗಿಯಲಿಲ್ಲ. ಇದೆಲ್ಲಾ ಮುಗಿದ ನಂತರ ರಾತ್ರಿ ಪ್ರಶಾಂತ್​ ಸಂಬರಗಿ ಬೆಡ್‌ ರೂಂ ನಲ್ಲಿ ಪ್ರಿಯಾಂಕಾ ಅವರ ಹತ್ತಿರ ನಡೆದ ವಿಷಯದ ಕುರಿತು ಏನ್​ ಆಯಿತು ಎಂದು ಕೇಳುತ್ತಾರೆ.

ಪ್ರಶಾಂತ್​: ಯಾಕೇ ಏನ್​ ಆಯಿತು

ಪ್ರಿಯಾಂಕಾ: ಏನ್​ ಆಯಿತು ಅಂತಾ ನನಗೆ ಗೊತ್ತಿಲ್ಲ. ಮೊದಲು ಶಮಂತ್​ ಬಂದು ಕೀಟಲೆ ಮಾಡ್ತಿದ್ದ. ಅದಕ್ಕೆ ನಾನು ಅವನಿಗೆ ಹೇಳುತ್ತಿದ್ದೆ, ಬೇಡ ಸುಮ್ನೆ ಹೋಗು ಎಂದು ತಮಾಷೆ ಮಾಡಿದೆ. ಅಷ್ಟರಲ್ಲಿ ಚಕ್ರವರ್ತಿ ಅವರು ಬಂದರು. ಕೈಕುಲುಕಲು ಪ್ರಯತ್ನಿಸಿದರು. ನಾನು ಸುಮ್ನೆ ತಮಾಷೆಗೆ ಕೈ ಹಿಂದೆ ತೆಗೆದೆ ಅಷ್ಟೆ. ಇಷ್ಟಕ್ಕೆ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನೀವೇ ಕೇಳಿಸಿಕೊಂಡ್ರಲ್ಲ. ಎಂತಹ ಶಬ್ಧಗಳನ್ನ ಬಳಸಿದರು ಅಂತಾ.. ಸ್ಕೋಪ್​, ನಕ್ರಾ ಅಂತಾ ಅಂದ್ರೆ ಏನ್​ ಅರ್ಥ..? ನಾನು ಈ ವಿಷಯ ಅವರನ್ನು ಕೇಳಿಲ್ಲ ನನಗೆ ಕೇಳಲು ಇಷ್ಟವೂ ಇಲ್ಲ. ಸುದೀಪ್​ ಸರ್​ ಯಾರು ಫೇಕ್​ ಅಂತಾ ಕೇಳಿದಾಗ ನನ್ನ ಹೆಸರು ತೆಗೆದುಕೊಂಡು ನಾನು ಫೇಕ್​, ಅನ್​ ರಿಯಲ್​ ಎನ್ನುತ್ತಾರೆ. ನಾನು ಅವರಿಗೆ ಒಂದು ಸ್ಥಾನ ನೀಡಿದ್ದಿನಿ, ಆದ್ರೆ ಅವರು ಈ ರೀತಿಯಾಗಿ ಮಾತನಾಡುವುದು ಸರೀನಾ? ನನಗೆ ದಿವ್ಯಾ ಸುರೇಶ್​ ಡೇ ಒನ್​ ಇಂದ ಕೂಡ ಸ್ನೇಹಿತೆ. ಅವಳನ್ನು ನನಗೆ ಬೀಡಲು ಆಗುವುದಿಲ್ಲ. ಅವಳ ಜೊತೆ ಇರುವುದಕ್ಕೆ ಇವರು ಈ ರೀತಿ ಹೇಳುವುದು ಸರೀನಾ?

ಅಷ್ಟರಲ್ಲಿ ಚಕ್ರವರ್ತಿ ಅವರು ಬರುತ್ತಾರೆ. ಪ್ರಶಾಂತ್​ ಅವರು ಚಕ್ರವರ್ತಿ ಅವರನ್ನು ಕೇಳುತ್ತಾರೆ..

ಚಕ್ರವರ್ತಿ: ನಂದೇ ತಪ್ಪು. ನಾನು ಆ ಹುಡುಗಿಗೆ ತುಂಬಾ ಸಪೋರ್ಟ್‌ ಮಾಡ್ತಿದ್ದೆ. ಆದ್ರೆ, ಅವಳು ನನಗೆ ಹೀಗೆ ಮಾಡಿದಳು, ಬಿಡು ಗುರು ನಾನ್​ ಮಾತಾಡಲ್ಲ, ಇವರದೆಲ್ಲಾ ನಂಗೆ ಗೊತ್ತು ಎನ್ನುತ್ತಾರೆ. ಅಲ್ಲಿಂದ ಪ್ರಿಯಾಂಕಾ ಎದ್ದು ಹೊರ ನಡೆಯುತ್ತಾರೆ.

ಬಿಗ್​ ಮನೆಯಲ್ಲಿ ಅಸಲಿ ಆಟ ಈಗ ಶುರುವಾದಂತಿದೆ. ಮೊದಲ ಇನ್ನಿಂಗ್ಸ್​ನ ಕೋಪ, ತಾಪ ಒಂದೊಂದಾಗಿ ಹೊರ ಬರುತ್ತಿದೆ. ಮಂಜು ಜೊತೆಗಿನ ವಾಕ್ಸಮರದ ನಂತರ ಚಂದ್ರಚೂಡ್‌ ಪ್ರಿಯಾಂಕಾ ಜೊತೆಯೂ ಜಗಳ ಮಾಡಿಕೊಂಡಿದ್ದಾರೆ. ಆದ್ರೆ, ಇದು ಇಷ್ಟಕ್ಕೆ ನಿಲ್ಲುವಂತೆ ಕಾಣ್ತಿಲ್ಲ.

The post ಕೂಡಿದ ಮನೆಯಲ್ಲಿ ಒಡೆದ ಮನಸುಗಳು.. ಅಸಲಿ ಆಟ ಈಗ ಶುರು.. appeared first on News First Kannada.

Source: newsfirstlive.com

Source link