2020ರಲ್ಲಿ ಕೊರೊನಾ ವಕ್ಕರಿಸಿ ಮೊದಲ ಬಾರಿ ಲಾಕ್​ಡೌನ್​ ಆದಾಗಿನಿಂದ ಎಲ್ಲರದ್ದೂ ಒಂದೇ ಗೋಳು. ಮನೆಯಲ್ಲಿ ಹೆಚ್ಚು ಹೊತ್ತು ಕಳೆಯೋದು ಕಷ್ಟ ಅಂತ. ಆದ್ರೆ ಜೀವದ ಮುಂದೆ ಮತ್ತೇನೂ ಇಲ್ಲ ಎನ್ನುವಂತೆ, ಇಷ್ಟವಿಲ್ಲದಿದ್ದರೂ ಮನೆಯಲ್ಲಿ ಇರಬೇಕಾದ ಅನಿವಾರ್ಯತೆ. ಲಾಕ್​​ಡೌನ್​ ವಿಚಾರವಾಗಿ ಜನ ರೋಸಿ ಹೋಗಿದ್ದಾರೆ. ನಟ ಧನಂಜಯ ಕೂಡ ಈ ಬಗ್ಗೆ ಮಾತನಾಡಿದ್ದು, ‘ಮನುಷ್ಯರನ್ನ ಕೂಡು ಹಾಕಿದ್ರೆ ಆಲೋಚನೆಗಳು ಸತ್ತು ಹೋಗುತ್ತೆ. ಕ್ರಿಯೇಟಿವ್​ ಆಗಿರೋದು ಕಷ್ಟ’ ಅಂದಿದ್ದಾರೆ. ಇದಲ್ಲದೇ, ಧನಂಜಯ ತಮಗೆ ಮನೆಯೊಳಗಿದ್ದು ಆಗ್ತಿರುವ ಅನುಭವಗಳನ್ನ ಹಂಚಿಕೊಂಡಿದ್ದು, ‘ಹೂವು ಬಾಡಿ ಹೋದ ಅನುಭವ ಇದು. ಸೂರ್ಯನ ಬೆಳಕು, ಗಾಳಿ ಬೇಕೇ ಬೇಕು’ ಅಂತ ಹೇಳಿದ್ದಾರೆ.

‘ಜನ ಈಗಂತೂ ಸಂಪೂರ್ಣ ರೋಸಿ ಹೋಗಿದ್ದಾರೆ. ಈ ಪರಿಸ್ಥಿತಿಯಿಂದ ಜನರ ಹೊರಗೆ ಬರಬೇಕು ಅಂದ್ರೆ ಅದನ್ನೆಲ್ಲಾ ಗಣನೆಗೆ ತೆಗೆದುಕೊಂಡು ಮುಂದೆ ಸಿನಿಮಾಗಳನ್ನ ಮಾಡಬೇಕು. ಅಂಥ ಕಂಟೆಂಟ್​ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.

ಈ ಲಾಕ್​ಡೌನ್​ನಲ್ಲಿ ದಿನಪತ್ರಿಕೆಯೊಂದಕ್ಕೆ ಆರ್ಟಿಕಲ್​ ಒಂದು ಬರೆದಿದ್ದೆ. ಆಲೋಚನೆಗಳು ಓಡ್ತಿತ್ತು. ಆದ್ರೆ ಮನೆಯವರಿಗೆ ಹೆಚ್ಚಿನ ಸಮಯವನ್ನ ಕೊಟ್ಟೆ. ಕೊರೊನಾ ಯುದ್ಧ ಗೆಲ್ಲೋದ್ರಲ್ಲೇ ಇದ್ದೆ. ಮನುಷ್ಯನ್ನ ಕೂಡು ಹಾಕಿದ್ರೆ ಖಂಡಿತ ಕ್ರಿಯೇಟಿವ್​ ಆಗಿರೋಕೆ ಕಷ್ಟ ಆಗುತ್ತೆ. ಒಂದಷ್ಟು ಜನ ಬರೆದಿರಬಹುದು. ಆದ್ರೆ ನನಗೆ ನಾನು ಕ್ರಿಯೆಟಿವ್​ ಆಗಿರಬೇಕು ಅಂದ್ರೆ ಸಂತೆಯಲ್ಲಿ, ಜನಗಳ ಮಧ್ಯೆ ಓಡಾಡಿಕೊಂಡು ಬರಬೇಕು, ಆರಾಮಾಗಿರಬೇಕು. ಕೂಡು ಹಾಕಿದ್ರೆ ಹೂವು ಬಾಡಿ ಹೋದ ಹಾಗೇ ಆಗುತ್ತೆ ನನಗೆ. ಸ್ವಲ್ಪ ಸೂರ್ಯನ ಬೆಳಕು, ಗಾಳಿ ಬೀಳಬೇಕು. ಅದಿಕ್ಕೆ ಈಗ ಮನೆ ಒಳಗಡೆನೇ ಕೂತು ತುಂಬಾ ಸಣ್ಣ ಆಗಿದ್ದೀನಿ.’

ಡಾಲಿ ಧನಂಜಯ, ನಟ

ಇನ್ನು ಧನಂಜಯ ಲಾಕ್​ಡೌನ್​ ಮುಗಿದು ಶೂಟಿಂಗ್​ಗೆ ಅವಕಾಶ ಸಿಕ್ಕಿದ್ರೆ, ಹೆಡ್​ ಬುಷ್​ ತಂಡವನ್ನ ಕೂಡಿಕೊಳ್ಳಲಿದ್ದಾರೆ. ಈಗಾಗಲೇ ಹೆಡ್​ ಬುಷ್​ ಸಿನಿಮಾ ತಂಡ ಮುಹೂರ್ತಕ್ಕೂ ಮೊದಲೇ ಮೊದಲ ಶೆಡ್ಯೂಲ್​ ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೆ 60-70ರ ದಶಕದ ಲೊಕೇಷನ್​​ನ ಅಗತ್ಯವಿದ್ದು, ಅದರಂತೆ ಕಾರ್ಯಪ್ರವೃತ್ತರಾಗಲಿದ್ದಾರೆ.

The post ‘ಕೂಡು ಹಾಕಿದ್ರೆ ಹೂವು ಬಾಡಿ ಹೋದ ಹಾಗೇ ಆಗುತ್ತೆ.. ಸೂರ್ಯನ ಬೆಳಕು, ಗಾಳಿ ಬೇಕು’ appeared first on News First Kannada.

Source: newsfirstlive.com

Source link