ಬೆಂಗಳೂರು: ಲವ್ ಗುರು ಸಿನಿಮಾ ಮೂಲಕವಾಗಿ ಡೈರೆಕ್ಟರ್ ಪಟ್ಟವನ್ನು ಅಂಲರಿಸಿದ ನಿರ್ದೇಶಕ ಪ್ರಶಾಂತ್ ರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೃತಕ ಆಕ್ಸಿಜನ್‍ನಿಂದ ಉಸಿರಾಡುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್‍ರಾಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೃತಕ ಆಕ್ಸಿಜನ್‍ನಿಂದ ಉಸಿರಾಟ ನಡೆಸುತ್ತಿದ್ದಾರೆ ಎನ್ನುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ತಿಳಿಸುತ್ತದೆ. ಆಲ್ ಈಸ್ ವೆಲ್ ಅಂತ ಬರೆದುಕೊಂಡು ವೀಡಿಯೋವನ್ನು ಪ್ರಶಾಂತ್ ರಾಜ್ ಟ್ವೀಟ್ ಮಾಡಿದ್ದಾರೆ.

ಅವರು ವೀಡಿಯೋಗೆ ನೀಡಿರುವ ಕ್ಯಾಪ್ಶನ್ ನೋಡಿದ್ರೆ ಪ್ರಶಾಂತ್ ರಾಜ್ ಚೇತರಿಸೊಕೊಳ್ತಿದ್ದು, ಅದನ್ನ ತಿಳಿಸೋದಕ್ಕೆ ವೀಡಿಯೋ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ. ಆದಷ್ಟು ಬೇಗ ಹುಷಾರ್ ಆಗಿ ಬರಲಿ ಎಂದು ಅಭಿಮಾನಿಗೂ ಟ್ವೀಟ್ ಮಾಡಿದ್ದಾರೆ.

The post ಕೃತಕ ಆಕ್ಸಿಜನ್‍ನಲ್ಲಿ ಉಸಿರಾಡುತ್ತಿರುವ ನಿರ್ದೇಶಕ- ಆಲ್ ಈಸ್ ವೆಲ್ ಅಂತ ಟ್ವೀಟ್ appeared first on Public TV.

Source: publictv.in

Source link