ಚಂಡೀಗಢ: ಕೇಂದ್ರ ನೂತನ ಮೂರು ಕೃಷಿ ಕಾನೂನುಗಳನ್ನ ವಿರೋಧಿಸಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಮನೆಯ ಮೇಲೆ ಕಪ್ಪು ಧ್ವಜ ಹಾರಿಸಿದ್ದಾರೆ. ಧ್ವಜ ಹಾರಿಸಿರುವ ವೀಡಿಯೋ ಹಂಚಿಕೊಂಡಿರುವ ನವಜೋತ್ ಸಿಂಗ್ ಸಿಧು ಪಂಜಾಬ್ ಜನತೆಗೆ ಸಂದೇಶ ರವಾನಿಸಿದ್ದಾರೆ.

ಕಳೆದ 20-25 ವರ್ಷಗಳಿಂದ ಆದಾಯ ಕುಸಿತ ಕಾಣುತ್ತಿದ್ದು, ಖರ್ಚು ಹೆಚ್ಚಾಗುತ್ತಿರೋದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮೂರು ಕೃಷಿ ಕಾನೂನುಗಳು ರೈತರು, ದಿನಗೂಲಿ ಕಾರ್ಮಿಕರು ಮತ್ತು ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯಲಿವೆ. ಆದ್ದರಿಂದ ಪಂಜಾಬ್ ರೈತರು ಆಂದೋಲನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಒಂದು ವೇಳೆ ಕೇಂದ್ರ ಮೂರು ಕಾನೂನು ಹಿಂಪಡೆಯದಿದ್ರೆ ಪಂಜಾಬ್ ಅಭಿವೃದ್ಧಿ ಆಗಲ್ಲ. ಈ ಮೂರು ಕಾನೂನು ವಿರೋಧಿಸಿ ನನ್ನ ಮನೆ ಮೇಲೆ ಕಪ್ಪು ಧ್ವಜ ಹಾರಿಸಿದ್ದೇನೆ. ಕಾನೂನು ಹಿಂಪಡೆಯವರೆಗೂ ಈ ಧ್ವಜ ಇಳಿಸಲ್ಲ. ಪ್ರತಿ ಪಂಜಾಬಿ ರೈತರ ಪ್ರತಿಭಟನೆಯನ್ನ ಬೆಂಬಲಿಸಬೇಕೆಂದು ಕರೆ ನೀಡಿದ್ದಾರೆ.

The post ಕೃಷಿ ಕಾನೂನು ವಿರೋಧಿಸಿ ಮನೆ ಮೇಲೆ ಕಪ್ಪು ಧ್ವಜ ಹಾರಿಸಿದ ಸಿಧು appeared first on Public TV.

Source: publictv.in

Source link