‘ಕೃಷಿ ಕಾಯ್ದೆ ವಾಪಸ್​ ಪಡೆದರೂ ಹೋರಾಟ ಹಿಂಪಡೆಯಲ್ಲ’ ಎಂದ ಟಿಕಾಯತ್ -ಯಾಕೆ ಗೊತ್ತಾ..?


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕಳೆದ ಒಂದು ವರ್ಷದಿಂದ ವಿವಾದದಲ್ಲಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಮೋದಿ ಈ ಘೋಷಣೆ ಬೆನ್ನಲ್ಲೇ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ಮತ್ತು ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ತಾವು ಪ್ರತಿಭಟನೆಯನ್ನ ಹಿಂಪಡೆಯುವುದಿಲ್ಲ ಎಂದಿದ್ದಾರೆ.

ಈ ಆಂದೋಲನವನ್ನು ತಕ್ಷಣವೇ ಹಿಂಪಡೆಯುವುದಿಲ್ಲ. ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಎಂಎಸ್‌ಪಿ ಜತೆಗೆ ರೈತರ ಇತರೆ ಸಮಸ್ಯೆಗಳನ್ನೂ ಕೇಂದ್ರ ಸರ್ಕಾರ ಚರ್ಚಿಸಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರ 2020 ಜೂನ್ 5 ರಂದು ಈ ಮೂರು ಕೃಷಿ ಕಾಯ್ದೆಯನ್ನ ಜಾರಿಗೆ ತಂದಿತ್ತು. ಇದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ್ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. 2020 ನವೆಂಬರ್​ನಿಂದ ಇಂದಿನವರೆಗೂ ರೈತರ ದೆಹಲಿಯ ವಿವಿಧ ಗಡಿಯಲ್ಲಿ ನಿರಂತರವಾಗಿ ಪ್ರತಿಭಟನೆ ಮಾಡುತ್ತ ಬಂದಿದ್ದರು. ಅಲ್ಲಿಂದ ಇಂದಿನವರೆಗೂ ರಾಕೇಶ್ ಟಿಕಾಯತ್ ನೇತೃತ್ವದ ರೈತ ಸಂಘಟನೆ ಪ್ರತಿಭಟನೆಯನ್ನ ಮಾಡುತ್ತಲೇ ಬಂದಿದೆ.

News First Live Kannada


Leave a Reply

Your email address will not be published. Required fields are marked *