ನವದೆಹಲಿ: ಎಂಎಸ್ಪಿ ವಿಚಾರವಾಗಿ ಕೇಂದ್ರ ಸರ್ಕಾರ ರೈತರೊಂದಿಗೆ ನೇರವಾಗಿ ಮಾತನಾಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.
ಯುನೈಟೆಡ್ ಕಿಸಾನ್ ಮೋರ್ಚಾದ ಸಭೆ ಬಳಿಕ ಮಾತನಾಡಿದ ಅವರು.. ಸರ್ಕಾರ ನಮ್ಮೊಂದಿಗೆ ಮಾತನಾಡಲು ಬಯಸುವುದಿಲ್ಲ. ಕೃಷಿ ಕಾಯ್ದೆ ರದ್ದು ಘೋಷಣೆ ಬೆನ್ನಲ್ಲೇ ಎಲ್ಲರ ದೃಷ್ಟಿ ಎಂಎಸ್ಪಿಯತ್ತ ನೆಟ್ಟಿದೆ. ಅದಕ್ಕಾಗಿ ಕಾನೂನು ಮಾಡಿ. ಈ ವಿಭಿನ್ನ ವಿಷಯಗಳನ್ನು ಪರಿಶೀಲಿಸುವ ಸಮಿತಿಯನ್ನು ರಚಿಸಿ ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆ ವೇಳೆ ರೈತರ ಸಾವಿನ ಕುರಿತು ಪ್ರತಿಕ್ರಿಯಿಸಿ.. 750 ರೈತರು ಹುತಾತ್ಮರಾಗಿದ್ದಾರೆ. ಭಾರತ ಸರ್ಕಾರ ಅದಕ್ಕೆ ಯಾವುದೇ ಉತ್ತರವನ್ನು ನೀಡಿಲ್ಲ. ನಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಯಾವುದೇ ಉತ್ತರವನ್ನು ನೀಡಿಲ್ಲ, ಲಖೀಂಪುರ ಘಟನೆಯ ಬಗ್ಗೆ ಉತ್ತರವಿಲ್ಲ ಎಂದು ಕಿಡಿಕಾರಿದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ನಿರ್ಧಾರ ಇಲ್ಲ. ಆದರೆ ಲಿಖೀಂಪುರ್ ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವ ಹೋರಟ ಮುಂದುವರಿಯಲಿದೆ. ರೈತರ ಭೂಮಿಯನ್ನು ಕಿತ್ತುಕೊಳ್ಳುವುದೇ ಮೋದಿ ಸರ್ಕಾರದ ದೊಡ್ಡ ಪ್ಲಾನ್. ಹುತಾತ್ಮರಾದ 700ಕ್ಕೂ ಹೆಚ್ಚು ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
The post ಕೃಷಿ ಕಾಯ್ದೆ ವಾಪಸ್ ಆಯ್ತು.. ಕೇಂದ್ರದ ಮುಂದೆ ಮತ್ತೊಂದು ಬೇಡಿಕೆ ಇಟ್ಟ ಟಿಕಾಯತ್ appeared first on News First Kannada.