ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಈಜಲು ಹೋದ ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಚಿನ್ನೇಪಲ್ಲಿ ಕ್ರಾಸ್ ಬಳಿ ನಡೆದಿದೆ.

ಬಾಗೇಪಲ್ಲಿ ಪಟ್ಟಣದ ಅಫ್ರಿದ್ ಬಾಷಾ ಹಾಗೂ ಮಹಮದ್ ಸುಹೇಲ್ ಮೃತರು. ಚಿನ್ನೇಪಲ್ಲಿ ಕ್ರಾಸ್ ಬಳಿಯ ರೈತ ಬಾಬಾಜಾನ್ ಎಂಬವರಿಗೆ ಸೇರಿದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು, ಕೆಸರಿನಲ್ಲಿ ಹೂತುಕೊಂಡ ಪರಿಣಾಮ ಇಬ್ಬರು ಯುವಕರು ದಾರುಣ ಸಾವನ್ನಪ್ಪಿದ್ದಾರೆ.

ಆಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳನ್ನ ಹೊರತೆಗೆದಿದ್ದು ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ದ್ವೀತಿಯ ಪಿಯುಸಿ ವ್ಯಾಸಂಗ ಮಾಡ್ತಿದ್ರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

The post ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರ ಸಾವು appeared first on Public TV.

Source: publictv.in

Source link