ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಿಂಪಲ್​ ಕ್ವೀನ್​ ರಚಿತಾ ರಾಮ್​, ಈಗಾಗಲೇ ಸ್ಯಾಂಡಲ್​ವುಡ್​ನ ಟಾಪ್​ ಮೋಸ್ಟ್​​ ನಟರ ಜೊತೆ ನಟಿಸಿದ್ದಾರೆ. ಇದೀಗ ವೆರೈಟಿ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದು, ಗ್ಯಾಪ್​ನಲ್ಲಿ ನಟ ಡಾರ್ಲಿಂಗ್​ ಕೃಷ್ಣ ಜೊತೆ ಪ್ರೀತಿಯಲ್ಲಿ ಬೀಳೋದಕ್ಕೆ ಫುಲ್​ ರೆಡಿಯಾಗಿದ್ದಾರೆ. ಹೌದು.. ಆದ್ರೆ ಈ ಪ್ರೀತಿ ರೀಲ್​ನಲ್ಲಿ ಮಾತ್ರ. ‘ಲವ್​ ಮಿ or ಹೇಟ್​ ಮಿ’ ಅಂತಿರುವ ಡಾರ್ಲಿಂಗ್​ ಕೃಷ್ಣ ಹಾಗೂ ರಚಿತಾ ರಾಮ್​, ತಮ್ಮ ಹೊಸ ಸಿನಿಮಾದ ವಿಭಿನ್ನ ಹೆಸರನ್ನ ಇಂದು ರಿವೀಲ್​ ಮಾಡಿದ್ದಾರೆ.

ಯೆಸ್​.. ನಟಿ ರಚಿತಾ ರಾಮ್​ ಹಾಗೂ ಡಾರ್ಲಿಂಗ್ ನಟನೆಯ ಸಿನಿಮಾದ ಟೈಟಲ್​ ಇಂದು ರಿವೀಲ್​ ಆಗಿದೆ. ಸಿನಿಮಾಗೆ ‘ಲವ್​ ಮಿ or ಹೇಟ್​ ಮಿ’ ಅಂತ ಹೆಸರಿಡಲಾಗಿದ್ದು, ಇದೊಂದು ಪ್ರೇಮ ಕಥೆ ಅನ್ನೋದು ಸ್ಪಷ್ಟವಾಗಿದೆ. ಆದ್ರೆ, ಯಾವ ಥರದ ಲವ್​ ಸ್ಟೋರಿ ಅನ್ನೋದು ಮಾತ್ರ ಮುಂದಿನ ದಿನಗಳಲ್ಲಿ ಆಗುವ ಬೆಳವಣಿಗೆಗಳಲ್ಲೇ ತಿಳಿಯಬೇಕು. ಸದ್ಯಕ್ಕಂತೂ ಲಾಂಚ್​ ಆಗಿರುವ ಟೈಟಲ್​ ಪೋಸ್ಟರ್​​ ಪ್ರೇಕ್ಷಕರ ಕಣ್ಣರಳಿಸಿದೆ.

ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ನಟಿಸಲಿರುವ ಈ ಸಿನಿಮಾವನ್ನ ದೀಪಕ್ ಗಂಗಾಧರ್ ನಿರ್ದೇಶನ ಮಾಡಲಿದ್ದಾರೆ. ಇದು ದೀಪಕ್​ ಗಂಗಾಧರ್​ಗೆ ಚೊಚ್ಚಲ ನಿರ್ದೇಶನ. ಚಿತ್ರಕ್ಕೆ ಸಂಗೀತ ನಿರ್ದೇಶಕ ಶ್ರೀಧರ್​ ವಿ.ಸಂಭ್ರಮ್​ ಸಂಗೀತ ನೀಡಲಿದ್ದಾರೆ.

The post ಕೃಷ್ಣಗೆ ಈಗ ರಚಿತಾ ‘ಡಾರ್ಲಿಂಗ್’: ‘ಲವ್​ ಮಿ or ಹೇಟ್​ ಮಿ’ ಎನ್ನುತ್ತಲೇ ಕ್ಯೂಟ್​​ ರೊಮ್ಯಾನ್ಸ್ appeared first on News First Kannada.

Source: newsfirstlive.com

Source link